Monday, June 30, 2025
spot_imgspot_img
spot_imgspot_img

ಮಂಗಳೂರು: ಅಪಘಾತದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ

- Advertisement -
- Advertisement -

ಮಂಗಳೂರು: ಪಿಕಪ್ ಹಾಗೂ ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕ್ಲಿನರ್ ನನ್ನು ತಮ್ಮದೇ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಕದ್ರಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಮನ್ ಶಿದಬಾನು ಮಾನವೀಯತೆ ಮೆರೆದಿದ್ದಾರೆ.

ಇಂದು ಮುಂಜಾನೆ ಕೆಪಿಟಿ ಬಳಿ ಪಿಕಪ್ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತವಾಗಿದ್ದು, ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಲೀನರ್ ನನ್ನು ಅದೇ ದಾರಿಯಲ್ಲಿ ಬಂದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮನ್ ಶಿದಬಾನು ರವರು ಕೂಡಲೇ ತಮ್ಮ ವಾಹನದಲ್ಲಿ ಎಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಮನ್ ಶಿದಬಾನು ಅವರು ಕರ್ತವ್ಯ ಜೊತೆ ಸಮಯ ಪ್ರಜ್ಞೆ ಮೆರೆದಿರುವುದು ಸ್ಪಷ್ಟನೆಯಾಗಿದೆ.

ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಕಮಿಷನರೇಟ್ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನ್ಸ್ಟೇಬಲ್ ಮನ್ಶಿದಾ ಬಾನು ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

- Advertisement -

Related news

error: Content is protected !!