Tuesday, July 28, 2026
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

- Advertisement -
- Advertisement -

’ಅಮ್ಮ’ ಎನ್ನುವ ಪವಿತ್ರ ಪದವಿರುವ ಕನ್ನಡ ಎಂದೆಂದಿಗೂ ಶ್ರೇಷ್ಠ” – ವಿಠಲ ನಾಯಕ್ ಬೊಳಂತಿಮೊಗರು

ವಿಟ್ಲ: 2023-24 ಕನ್ನಡ ರಾಜ್ಯೋತ್ಸವ ಆಚರಣೆಯ 50ನೇ ಸಂಭ್ರಮ ವರ್ಷವಾಗಿದ್ದು, ಸಮಾರೋಪ ಸಮಾರಂಭವು ವಿಟ್ಲ ಬಸವನಗುಡಿ ವಿಠ್ಠಲ್ ಜೇಸಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯಿತು.

ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಠಲ ನಾಯಕ್ ಬೊಳಂತಿಮೊಗರುರವರು “ಮನಸ್ಸಿನ ಭಾವಗಳನ್ನು ವ್ಯಕ್ತಪಡಿಸಲಾಗುವ ಶುದ್ಧ ಭಾಷೆಯಾಗಿದ್ದು ’ ಅಮ್ಮ’ ಎನ್ನುವ ಪವಿತ್ರ ಪದವಿರುವ ಕನ್ನಡ ಎಂದೆಂದಿಗೂ ಶ್ರೇಷ್ಠ” ವಾಗಿರುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ರಾಧಾಕೃಷ್ಣ ಪೈ, ನಿರ್ದೇಶಕ ಹಸನ್ ವಿಟ್ಲ, ಸಂತೋಷ್ ಶೆಟ್ಟಿ ಪೆಲತಡ್ಕ,ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲ ಜಯರಾಮ ರೈ ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಹ ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು, ಸೌಮ್ಯ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. “ಕನ್ನಡ ಸಾಹಿತ್ಯ ಸಂಭ್ರಮ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ಕೊಟ್ಟಿತು.

- Advertisement -

Related news

error: Content is protected !!