Monday, July 27, 2026
spot_imgspot_img
spot_imgspot_img

ಪುತ್ತೂರು: ಡಿ.28-29 ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ಶ್ರೀನಿವಾಸ ಕಲ್ಯಾಣೋತ್ಸವ

- Advertisement -
- Advertisement -

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಡಿ.28 ಹಾಗೂ 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಭೂಮಿಯಲ್ಲಿ ಅತ್ಯಂತ ಶ್ರೇಷ್ಠ ಸನ್ನಿಧಿಯಿದ್ದರೆ ಅದು ತಿರುಪತಿ ಕ್ಷೇತ್ರ. ಸಪ್ರಗಿರಿವಾಸ ಹೆಸರಿನೊಂದಿಗೆ ತಿರುಪತಿ ಕ್ಷೇತ್ರ ಸಾಕಷ್ಟು ಬೆಳೆದಿದೆ. ಕಲಿಯುದಲ್ಲಿ ಅತ್ಯಂತ ವಿಶಿಷ್ಟ ಅನುಗ್ರಹ್ನ ಮಾಡುವ ಶಕ್ತಿ ಇರುವುದು ಶ್ರೀಕೃಷ್ಣನಿಗೆ. ಅದೇ ಕೃಷ್ಣನ ಇನ್ನೊಂದು ರೂಪ ಪಾಂಡುರಂಗ ವಿಠಲಪಂಡಾರಪುರಞಹಾಗೂ ಶ್ರೀನಿವಾಸ ದೇವರು. ವೈಕುಂಠಾಧಿಪತಿ ಶ್ರೀನಿವಾಸ ದೇವರ ಉತ್ಸವ ಮೂರ್ತಿಯೊಂದಿಗೆ ಶ್ರೀನಿವಾಸಕಲ್ಯಾಣೋತ್ಸವ ನಡೆಯಲಿದೆ.

ಈ ಶ್ರೇಷ್ಠ ಧಾರ್ಮಿಕ ಕಾರ್ಯಕ್ರಮದಿಂದ ಭಕ್ತರಿಗೆ ವಿಶೇಷ ಅನುಗ್ರಹ ಮಾಡಲಿ. ಸನಾತನ ಧರ್ಮ ಸಂಸ್ಕೃತಿಯ ಜಾಗೃತಿ ಉಂಟಾಗಬೇಕು ಎಂಬುದು ಕಾರ್ಯಕ್ರಮದ ಉದ್ದೇಶ. ಇದಕ್ಕೆ ಪೂರಕವಾಗಿ ಆಹ್ವಾನ ಪತ್ರಿಕೆ ಬಿಡುಗಡೆ ಇಂದು ನಡೆದಿದೆ. ಧಾರ್ಮಿಕ, ರಾಜಕೀಯ ಮುಖಂಡ ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆಬಿಡುಗಡೆ ಮಾಡಿರುವುದು ಅತೀವ ಸಂತೋಷ ತಂದಿದೆ ಎಂದರು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್‌ ಕುಮಾರ್ ಪುತ್ತಿಲ ಮಾತನಾಡಿ, ಡಿ.28 ಮತ್ತು 29ರಂದು ನಡೆಯುವ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ಜರುಗುತ್ತದೆ. ಧರ್ಮಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ಸನಾತನ ಧರ್ಮ ಪರಂಪರೆಯ ಕಲ್ಯಾಣಕ್ಕಾಗಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಎಲ್ಲಾ ಹಿಂದೂ ಬಂಧುಗಳ ಸಹಕಾರ ಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯರಾದ ಬೂಡಿಯಾರು ರಾಧಾಕೃಷ್ಣ ರೈ, ಗೋಪಾಲಕೃಷ್ಣ ಭಟ್ ದ್ವಾರಕ, ಚಂದಪ್ಪ ಮೂಲ್ಯ,ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಸ್ವಾಗತ ಸಮಿತಿ ಸಂಚಾಲಕರಾದ ಪ್ರಸನ್ನ ಕುಮಾರ್ ಮಾರ್ತ,ಅನಿಲ್ ತೆಂಕಿಲ, ಕಾರ್ಯಧ್ಯಕ್ಷ ಉಮೇಶ್‌ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ರವಿಕುಮಾ‌ರ್ ರೈ ಕೆದಂಬಾಡಿಮಠ, ಕೋಶಾಧಿಕಾರಿ ಉದಯಕುಮಾ‌ರ್ ರೈ, ಕಾರ್ಯದರ್ಶಿಗಳಾದ ಗಣೇಶ್ ಭಟ್‌ ಮಕರಂದ, ಪ್ರವೀಣ್ ಶೆಟ್ಟಿ ತಿಂಗಳಾಡಿ ಸಹಿತ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!