





ಆಟೋ ಚಾಲಕ ಬೋಳಂತೂರು ರಹೀಂ ಅಂತಿಂಥ ಸಾಮಾನ್ಯ ವ್ಯಕ್ತಿಯಲ್ಲ. ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚು ಕಡೆಗಳಲ್ಲಿ ಮಹಿಳೆಯರು ಮೇಲೆ ದೌರ್ಜನ್ಯ ಎಸಗುತ್ತಾ ಕಿರುಕುಳ ನೀಡಿರುವುದನ್ನು ಸ್ವತಃ: ಆತನ ಸಂಬಂಧಿಕರು ಮತ್ತು ಊರಿನವರೇ ಹೇಳುತ್ತಿದ್ದಾರೆ. ಆತನ ಹುಚ್ಚಾಟದಿಂದಾಗಿ ಇತರ ಆಟೋ ಚಾಲಕರ ಮಾನ-ಮರ್ಯಾದೆ ಹರಾಜಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಈತನ ಆಟೋದಲ್ಲಿ ಬಾಡಿಗೆ ಹೋಗುವ ಯುವತಿಯರ ಮತ್ತು ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದು ಬಳಿಕ ತನ್ನ ಹುಚ್ಚಾಟ ಮೆರೆಯುತ್ತಾನೆ. ಈತನ ಮಾನಗೇಡಿ ಬುದ್ಧಿಯಿಂದ ಆಗಿ ಈಗಾಗಲೇ ಹಲವು ಮಹಿಳೆಯರು ತಮ್ಮ ದಾಂಪತ್ಯ ಜೀವನ ಕಳೆದುಕೊಂಡಿದ್ದಾರೆಂದು ಊರಿನವರು ಹೇಳಿದ್ದಾರೆ. ಈತನ ವಿಕೃತ ಮನಸ್ಥಿತಿಯಿಂದಾಗಿ ಆಟೋ ಚಾಲಕ ಸಮುದಾಯ ತೀವ್ರ ಆತಂಕ ವ್ಯಕ್ತಪಡಿಸಿದೆ. ಆಟೋ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳು ಇನ್ನಾದರೂ ರಹೀಂನ ತಮ್ಮ ಗುಂಪಿನಿಂದ ಒದ್ದೋಡಿಸಿ ಆಟೋ ಚಾಲಕರ ಮೇಲಿನ ಗೌರವ, ಘನತೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜ ಸ್ವಾಸ್ಥ್ಯ ಹಾಳುಗೆಡಹುವ ಚಾಲಕ ರಹೀಂನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.








