





ಅಳಿಕೆ ಗ್ರಾಮದ ಚಂದಾಡಿ ದಿವಂಗತ ಅನ್ವಿತಾ ಹೆಗ್ಡೆ ಸ್ಮರಣಾರ್ಥ ನಡೆದ ಮಕ್ಕಳ ಚದುರಂಗ ಸ್ಪರ್ಧೆ ಡಿ.22 ರಂದು ಚಂದಾಡಿ ಮನೆಯಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ 244 ಮಕ್ಕಳು ಭಾಗವಹಿಸಿ ಒಂದು ಇತಿಹಾಸವನ್ನೇ ಬರೆದರು.ಸ್ಪರ್ಧೆಯು 17,13,11,9, ವಯಸ್ಸಿಗಿಂತ ಕೆಳಗಿನ ಬಾಲಕ ಬಾಲಕಿಯರ ನಡುವೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯಿತು. ಎಲ್ಲಾ ವಯೋಮಿತಿಯ ಬಾಲಕ ಬಾಲಕಿಯರ ಪೈಕಿ ಅತಿಹೆಚ್ಚು ಅಂಕ ಗಳಿಸಿದ ವಿಜೇತರಿಗೆ ನಗದು, ಟ್ರೋಫಿ, ಚೆಸ್ ಸೆಟ್ ಹಾಗೂ ಪ್ರಮಾನಪಾತ್ರಗಳನ್ನುವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಫರ್ಥಾಳುಗಳಿಗೂ ಚೆಸ್ ಸೆಟ್ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಬಾಗ ವಹಿಸಿದ ಎಲ್ಲಾ ಸ್ಪರ್ಧಾಳುಗಳು ಹಾಗೂ ಅವರ ಪೋಷಕರಿಗೂ ಆಲ್ಲಿ ನೆರೆದಿದ್ದ ಇತರ ಎಲ್ಲರಿಗೂ ಬೆಳಗ್ಗಿನ ಉಪಹಾರ, ಮದ್ಯಾಹ್ನದ ಊಟ ಸಾಯಂಕಾಲ ಲಘೂಪಹಾರ ಹಾಗೂ ಸಮೀಪದ ಪಡಿಭಾಗಿಲು ಹಾಗೂ ಚಂದಾಡಿಯ ಮದ್ಯೆ ಉಚಿತ ವಾಹನ ಸೌಲಭ್ಯ ಒದಗಿಸಲಾಗಿತ್ತು. ಸಮಾರಂಭದ ಉದ್ಘಾಟನೆಯನ್ನು ಲೋಕಸೇವಾ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಗಳಾದ ಮಾನ್ಯ ಚಂದ್ರ ಶೇಖರ್ ಭಟ್ ಮತ್ತು ಅಳಿಕೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಾನ್ಯ ಸಣ್ಣ ಗುತ್ತು ಪದ್ಮನಾಭ ಪೂಜಾರಿ ಯವರ ಸಮಕ್ಷಮ ಡಲ್ಲಿ ನಡೆಯಿತು. ಚದುರಂಗ ಸ್ಪರ್ಧೆಯ ಉದ್ಘಾಟನೆಯನ್ನು ಮಾನ್ಯ ಚಂದ್ರಶೇಖರ್ ಭಟ್ ನೆರವೇರಿಸಿದರು.ಸ್ಪರ್ಧೆಯು ಎಲ್ಲಾ ವಯೋಮಿತಿಯ ಗುಂಪುಗಳಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಬಾಲಕ ಬಾಲಕಿಯರಿಗೆ ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಗಳ ಪ್ರಿನ್ಸಿಪಾಲ್ ವಿ.ಕೆ ಶರ್ಮ ಮತ್ತು ಡಾ: ರವಿಕಿರಣ ಮೊಗಸಾಲೆ , ಬಹುಮಾನ ವಿತರಿಸಿದರು.








