Thursday, June 4, 2026
spot_imgspot_img
spot_imgspot_img

ವಿಟ್ಲ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ; 12 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಶಾಸಕರು ಖುದ್ದು ಫೀಲ್ಡಿಗೆ ಇಳಿದರೂ ಕೂಡ ಕನಿಷ್ಠ ಒಂದು ಸೀಟ್ ಕೂಡ ಸಿಗದೇ ಕಾಂಗ್ರೇಸಿಗೆ ಮುಖಭಂಗ -ಹರಿಪ್ರಸಾದ್ ಯಾದವ್

- Advertisement -
- Advertisement -

ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12ಕ್ಕೆ ಹನ್ನೆರಡೂ ಸೀಟಿನಲ್ಲಿ ಭರ್ಜರಿ ವಿಜಯ ಕಾಂಗ್ರೇಸಿಗೆ ಆಗಿರುವ ಮುಖಭಂಗ ಎಂದು ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರು ವಿಟ್ಲ ಮಹಾಶಕ್ತೀ ಕೇಂದ್ರ ಉಸ್ತುವಾರಿಯಾಗಿರುವ ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಇದ್ದು ಅದರಲ್ಲೂ ಪುತ್ತೂರಿನಲ್ಲಿ ಕಾಂಗ್ರೇಸಿನ ಶಾಸಕರು ಖುದ್ದು ಫೀಲ್ಡಿಗೆ ಇಳಿದರೂ ಕೂಡ ಕನಿಷ್ಠ ಒಂದು ಸೀಟ್ ಕೂಡ ಸಿಗದೇ ವಿಟ್ಲದ ರೖತಾಪಿ ವರ್ಗ ಮತ್ತು ಮತದಾರ ಬಾಂಧವರು ಗ್ಯಾರೆಂಟಿ ಮತ್ತು ಅಮಿಷಕ್ಕೆ ಬಲಿಯಾಗದೆ ಬಿಜೆಪಿಯನ್ನು ಬೆಂಬಲಿಸಿರುವುದು ಸಂತಸ ತಂದಿದೆ ಮತ್ತು ಗೆಲುವಿನ ಕಾರಣೀಭೂತರಾದ ಪಾರ್ಟಿಯ ಎಲ್ಲಾ ಸ್ತರದ ದೇವದುರ್ಲಭ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ನರ್ಸಪ್ಪ ಪೂಜಾರಿಮಹಾಬಲೇಶ್ವರ ಭಟ್ಮೋಹನ್ ದಾಸ್ ಉಕ್ಕುಡರಾಘವೇಂದ್ರ ಪೖಸದಾನಂದ ಗೌಡತೀರ್ಥರಾಮ ಗೌಡವಾಸು ಸಿ. ಎಚ್ (S. C ಮೀಸಲು ದಿನೇಶ್ ಗೌಡ, ಉದಯ ಕುಮಾರ್, ಮಂಜುಳಾ, ಸಂಧ್ಯಾ ಮೋಹನ್, ಹರೀಶ್ ನಾಯ್ಕ್ (S.T ಮೀಸಲು ) ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿ ಬ್ಯಾಂಕ್ ನಾ ನಿರ್ದೇಶಕರಾಗಿ ಆಯ್ಕೆಯಾಗಿದರೆ.

- Advertisement -

Related news

error: Content is protected !!