Thursday, September 10, 2026
spot_imgspot_img
spot_imgspot_img

(ಜ.15-20) ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

- Advertisement -
- Advertisement -

ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಜ.15ನೇ ಬುಧವಾರದಿಂದ 20ನೇ ಸೋಮವಾರದವರೆಗೆ ನಡೆಯಲಿದೆ.

ಶ್ರೀಮದ್ ಜಗದ್ಗುರು ಶಂಕರಾಚಾರ್ಯಪೀಠ ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರಮಠ, ಹೊಸನಗರ ಇವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ವನದುರ್ಗಾದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಜ.15ನೇ ಬುಧವಾರದಿಂದ 20ನೇ ಸೋಮವಾರದವರೆಗೆ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದಿನಾಂಕ 15-01-2025ನೇ ಬುಧವಾರ ಬೆಳಿಗ್ಗೆ 9.30 ರಿಂದ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 5:00ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆದು ಸಂಜೆ 5:30 ರಿಂದ ಶ್ರೀ ಗಿರೀಶ್ ರೈ ಕಕ್ಕೆಪದವು ಮತ್ತು ಶ್ರೀಮತಿ ಕಾವ್ಯಶ್ರೀ ಅಜೇರು ಮತ್ತು ಬಳಗದವರಿಂದ ಯಕ್ಷಗಾನ ವೈಭವ ನಡೆಯಲಿದೆ. ಸಂಜೆ 7:30ಕ್ಕೆ ಧ್ವಜಾರೋಹಣ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ.

ದಿನಾಂಕ 16-01-2025ನೇ ಗುರುವಾರ ಬೆಳಿಗ್ಗೆ 9:30 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಲಿದೆ. ಮಧ್ಯಾಹ್ನ 12:00ಕ್ಕೆ ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 5:30 ರಿಂದ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇವರ ವತಿಯಿಂದ ಶ್ರೀಮತಿ ಶಾಲಿನಿ ಶ್ರೀಕಾಂತ್ ಮತ್ತು ಬಳಗ ಪ್ರಣಪ ನೃತ್ಯಾಲಯ ಬೆಂಗಳೂರು ಭರತನಾಟ್ಯ ನಡೆಯಲಿದೆ. ಸಂಜೆ 6:30ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಿಶೇಷ ವಸಂತ ಕಟ್ಟೆ ಪೂಜೆ, ನೃತ್ಯ ಬಲಿ ನಡೆಯಲಿದೆ.

ದಿನಾಂಕ 17-01-2025ನೇ ಶುಕ್ರವಾರ ಬೆಳಗ್ಗೆ 9:30 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ಪೂರ್ವಾಹ್ನ 11:00ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಕೆದಿಲದಿಂದ ಮಹಾದೈವಗಳ ಭಂಡಾರ ಆಗಮನ, ದೇವರ ಭೇಟಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5:30 ರಿಂದ ಶ್ರೀ ಕಿಶೋರ್ ಕುಮಾರ್ ಪೆರ್ಲ ಮತ್ತು ಬಳಗದವರಿಂದ ಭಕ್ತಿ ರಸ ಮಂಜರಿ ನಡೆಯಲಿದೆ. ಸಂಜೆ 7:00ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ ನಡೆದು ಬಳಿಕ ಅಷ್ಟಾವಧಾನ ಸೇವೆ ಪೂರ್ವಕ : ಉಯ್ಯಾಲೋತ್ಸವ ನಡೆಯಲಿದೆ.

ದಿನಾಂಕ 18-01-2025ನೇ ಶನಿವಾರ ಬೆಳಿಗ್ಗೆ 9:00ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.00 ಗಂಟೆಗೆಧಾರ್ಮಿಕ ಸಭೆ ನಡೆಯಲಿದೆ.

ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಡಾ| ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ ಆಶೀರ್ವಚನ ನೀಡಲಿದ್ದಾರೆ. ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸಾಂದೀಪನಿ ಮಠ, ಶ್ರೀ ಕ್ಷೇತ್ರ ಕೇಮಾರು ಅನುಗ್ರಹ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7.00ಕ್ಕೆ ದೀಪೋತ್ಸವ, ಕ್ಷೇತ್ರ ಮಹಾ ದೈವ ರಕೇಶ್ವರಿಯ ಭೇಟಿ ನಡೆದು ಬಳಿಕ ರಾತ್ರಿ 8:15 ರಿಂದ ರಥೋತ್ಸವ ನಡೆಯಲಿದೆ.

ದಿನಾಂಕ 19-01-2025ನೇ ಆದಿತ್ಯವಾರ ಬೆಳಿಗ್ಗೆ 10.00ಕ್ಕೆ ಕವಾಟೋದ್ಘಾಟನೆ, ತೈಲಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಬೆಳಿಗ್ಗೆ 10.00ಕ್ಕೆ ಶ್ರೀ ದೇವರ ಬಲಿ ಹೊರಟು ಮೆರವಣಿಗೆ ‘ಅವನೃತ ಸ್ನಾನ’, ಧ್ವಜಾವರೋಹಣ ಅವಕೃತ ಸ್ನಾನ : ಕಲ್ಲಾಜೆ ದಿ| ಶ್ರೀಮತಿ ಸುಗಂಧಿ ಶೆಟ್ಟರ ಶ್ರೀ ದೇವರ ಕೆರೆಯಲ್ಲಿ ಕಟ್ಟೆಪೂಜೆ : ಕಲ್ಲಾಜೆ ಪಂಚವಟಿ ದೇವರ ಮಂಟಪ ನಡೆಯಲಿದೆ. ರಾತ್ರಿ 9.30ಕ್ಕೆ ಶ್ರೀ ಬಪ್ಪನಾಡು ಮೇಳ ಇವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಲಿದೆ.

ದಿನಾಂಕ 20-01-2025ನೇ ಸೋಮವಾರ ಬೆಳಿಗ್ಗೆ 8:00ರಿಂದ ಮಹಾಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ವೇದಪಾರಾಯಣ, ಸೀಯಾಳಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5:30 ರಿಂದ ಶ್ರೀಕೃಷ್ಣ ಕಲಾವೃಂದ ಕರಿಮಜಲು ಇವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ರಾತ್ರಿ 7:30 ಮಹಾ ರಂಗಪೂಜೆ, ಬಳಿಕ ರಾತ್ರಿ 8.00ರಿಂದ ಕ್ಷೇತ್ರದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!