

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ ) ಶ್ರೀ ಮಲರಾಯ- ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ ಮಾಡ ದಿನಾಂಕ :12/02/2025 ನೇ ಬುಧವಾರ ಮತ್ತು 13/02/2025 ಗುರುವಾರ ಎರಡು ದಿನ ನಡೆಯಲಿರುವ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಿಷ್ಣುಮಂಟಪದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕಟ್ನಾಜೆ, ಸಂಘಟನಾ ಕಾರ್ಯದರ್ಶಿ ಯತೀಶ್ ಹಡಿಲು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಬೆಳ್ಳಿಯಪ್ಪ ಗೌಡ ಮಾರ್ಪು, ಕೋಶಾಧಿಕಾರಿ ಲಿಂಗಪ್ಪಗೌಡ ಅರ್ಕಲ್ ತೋಟ, ಶ್ರೀ ವಿಷ್ಣುಮೂರ್ತಿ ಯುವಕ ಮಂಡಲದ ಅಧ್ಯಕ್ಷರಾದ ಮನೋಜ್ ಕಂಪ ಮತ್ತು ಸದಸ್ಯರು ಉಪಸ್ಥಿತರಿದ್ದರು.ದಿನಾಂಕ 12-02-2025ನೇ ಬುಧವಾರ ದಂದು ಪೂರ್ವಾಹ್ನ ಗಂಟೆ 8.30ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮೂಲಸ್ಥಳ ಕುಂಡಡ್ಕ ಬದಿಕೆರೆಯಿಂದ ಕಲಶ ತರುವುದು.ಪೂರ್ವಾಹ್ನ ಗಂಟೆ 9.00ಕ್ಕೆ : ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಹಾಲು ಅಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ ನಡೆಯಲಿರುವುದು.ಪೂರ್ವಾಹ್ನ ಗಂಟೆ 9.00ಕ್ಕೆ : ನವಕ ಪ್ರಧಾನ ಕಲಶ, ಗಣಪತಿ ಹೋಮಪೂರ್ವಾಹ್ನ ಗಂಟೆ 9.30ಕ್ಕೆ : ಮಾತೆಯರಿಂದ ಕುಂಕುಮಾರ್ಚನೆಮಧ್ಯಾಹ್ನ ಗಂಟೆ 12.00ಕ್ಕೆ : ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆಸಂಜೆ ಗಂಟೆ 5.00ಕ್ಕೆ : ಡೆಚ್ಚಾರು ಮಲರಾಯ ದೈವದ ಭಂಡಾರ ಮನೆಯಿಂದ ಮಲರಾಯ ದೈವದ ಭಂಡಾರ ಹೊರಡುವುದುಸಂಜೆ ಗಂಟೆ 6.00ಕ್ಕೆ : ಶ್ರೀ ದುರ್ಗಾಪೂಜೆರಾತ್ರಿ ಗಂಟೆ 7.00ಕ್ಕೆ : ಮಲರಾಯ ದೈವದ ಭಂಡಾರ ದೇವಸ್ಥಾನಕ್ಕೆ ಆಗಮನ ನಿತ್ಯಪೂಜೆ, ಶ್ರೀ ರಂಗಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8.30ಕ್ಕೆ : ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ ಜರುಗಲಿದೆ.ಸಂಜೆ ಗಂಟೆ 6.00ಕ್ಕೆ : ಯಕ್ಷನಂದನ ಕಲಾ ಸಂಘ ಗೋಕುಲನಗರ ಕ್ಕೊಲ ಇಲ್ಲಿಯ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ “ಏಕಾದಶಿ ದೇವಿ ಮಹಾತ್ಮ”ನಡೆಯಲಿದೆ.ದಿನಾಂಕ 13-02-2025ನೇ ಗುರುವಾರಪೂರ್ವಾಹ್ನ ಗಂಟೆ 9.30ಕ್ಕೆ : ಶ್ರೀ ದೇವರ ಬಲಿ ಉತ್ಸವ ಪೂರ್ವಾಹ್ನ ಗಂಟೆ 11.00ಕ್ಕೆ : ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಮಧ್ಯಾಹ್ನ ಗಂಟೆ 12.00ಕ್ಕೆ : ಮಹಾಮಂಗಳಾರತಿ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.








