Tuesday, July 28, 2026
spot_imgspot_img
spot_imgspot_img

ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಪಿಕಪ್

- Advertisement -
- Advertisement -

ಮಾಣಿ ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ದ್ವಿಚಕ್ರವಾಹನಕ್ಕೆ ಪಿಕಪ್ ಡಿಕ್ಕಿಹೊಡೆದು ಪರಾರಿಯಾದಘಟನೆಯಿಂದ ದ್ವಿಚಕ್ರವಾಹನ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪಂಜ ಕೂತ್ಕುಂಜ ಗ್ರಾಮದ ಸಂಪ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಭಟ್‌ ಮೃತಪಟ್ಟ ಬೈಕ್‌ ಸವಾರ.ಕಾರ್ಯ ನಿಮಿತ್ತ ಕೃಷ್ಣ ಭಟ್ ಅವರು ಪಂಜದಿಂದ ಪುತ್ತೂರಿಗೆ ಬೈಕ್ ನಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ, ಬೈಕ್ ನೊಂದಿಗೆ ನೆಲಕ್ಕೆ ಉರುಳಿ ಬಿದ್ದಿದ್ದು, ಇದನ್ನು ಗಮನಿಸಿಯೂ, ಯಾವುದೇ ಮಾನವೀಯತೆಯನ್ನೂ ತೋರಿಸದೆ, ಪಿಕಪ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

- Advertisement -

Related news

error: Content is protected !!