Tuesday, July 28, 2026
spot_imgspot_img
spot_imgspot_img

ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರರಿಬ್ಬರ ಸಾವು

- Advertisement -
- Advertisement -

ಬಸ್ರೂರು: ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಮಾ.28ರ ಸಂಜೆ 4.30ರ ಸುಮಾರಿಗೆ ಕುಂದಾಪುರ – ಸಿದ್ದಾಪುರ ರಾಜ್ಯ ಹೆದ್ದಾರಿಯ ಬಳ್ಕೂರಿನಲ್ಲಿ ಸಂಭವಿಸಿದೆ.ಬಸ್ರೂರು ಬಿ.ಎಚ್‌.ನ ನಿವಾಸಿ ರಾಜೇಶ್‌ ಶೆಟ್ಟಿ (64) ಹಾಗೂ ಹಳ್ನಾಡಿನ ಸುಧೀರ್‌ ದೇವಾಡಿಗ (35) ಮೃತಪಟ್ಟವರು.ಬಿಎಚ್‌ನಲ್ಲಿ ಸುಧೀರ್‌ ದೇವಾಡಿಗ ಎಲೆಕ್ಟ್ರಿಕ್‌ ಅಂಗಡಿ ನಡೆಸುತ್ತಿದ್ದು, ಅಂಗಡಿ ಇರುವ ಜಾಗ ರಾಜೇಶ್‌ ಶೆಟ್ಟರದ್ದಾಗಿತ್ತು ಎಂದು ತಿಳಿದು ಬಂದಿದೆ. ಇವರಿಬ್ಬರು ಜತೆಯಾಗಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇವರು ಬಸ್ರೂರು ಕಡೆಯಿಂದ ಕಂಡ್ಲೂರು ಕಡೆಗೆ ಸಂಚರಿಸುತ್ತಿದ್ದಾಗ ಬಳ್ಕೂರಿನ ಸರಕಾರಿ ಹಿ.ಪ್ರಾ. ಶಾಲೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಕಾರು ಢಿಕ್ಕಿಯಾದ ರಭಸಕ್ಕೆ ಸ್ಕೂಟರ್‌ ರಸ್ತೆಯಿಂದ ಕೆಳಕ್ಕೆ ಎಸೆಯಲ್ಪಟ್ಟಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಕೂಡ ಜಖಂಗೊಂಡಿದೆ.ಸಾಗರ ನೋಂದಣಿಯ ಕಾರು ಇದಾಗಿದ್ದು, ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

- Advertisement -

Related news

error: Content is protected !!