- Advertisement -
- Advertisement -





ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.
ಇಂದಿನ ಕಾರ್ಯಕ್ರಮವನ್ನು ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತ್ರಿಶೂಲ್ ಫ್ರೆಂಡ್ಸ್ ಕಲ್ಲಡ್ಕ, ಸ್ವಸ್ತಿಕ್ ಫ್ರೆಂಡ್ಸ್, ಡಾ.ಕಾಮತ್ ಅಮ್ಮ್ಟೂರ್, ಶಿವಂ ಫ್ರೆಂಡ್ಸ್ ಕಡೆಶಿವಾಲಯ, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -