Saturday, June 28, 2025
spot_imgspot_img
spot_imgspot_img

ಬೈಕ್‌ಗಳು ನಡುವೆ ಅಪಘಾತ; ಇಬ್ಬರು ಯುವಕರು ಸಾವು..!

- Advertisement -
- Advertisement -

ಬೆಂಗಳೂರು: ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್‌ಗಳು ಟಚ್ ಆಗಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೈಸೂರು ರೋಡ್ ಫ್ಲೈಓವರ್‌ನಲ್ಲಿ ನಡೆದಿದೆ.

ಮೃತರನ್ನು ಆಕಾಶ್ ಮತ್ತು ಅಫ್ಜಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಣಿ ಮತ್ತು ಆಸಿಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮಂಗಳೂರು ಮೂಲದವರಾದ ಆಸಿಮ್, ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 2ರ ಸುಮಾರಿಗೆ ಊಟಕ್ಕೆಂದು ಹೊರಗೆ ಹೊರಟಿದ್ದರು. ಇದೇ ವೇಳೆ ಕೆಪಿ ಅಗ್ರಹಾರ ನಿವಾಸಿಗಳಾದ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಣಿ, ಆಕಾಶ್ ಅದೇ ರಸ್ತೆಯಲ್ಲಿ ಹೊರಟಿದ್ದರು. ಈ ವೇಳೆ ಓವರ್‌ಟೇಕ್ ಮಾಡಲು ಬೈಕ್ ಸವಾರರಿಬ್ಬರು ವೇಗವಾಗಿ ಓಡಿಸಿದ್ದಾರೆ. ಪರಿಣಾಮ ಬೈಕ್‌ಗಳು ಪರಸ್ಪರ ಟಚ್ ಆಗಿದ್ದು, ರಸ್ತೆಗೆ ಬಿದ್ದಿದ್ದಾರೆ.

ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!