


ಇರಂದೂರು: ನವಚೇತನ ಗೆಳೆಯರ ಬಳಗ ಇರಂದೂರು, ಪಡೀಲ್ ಆಶ್ರಯದಲ್ಲಿ ಯಶಸ್ವಿ ನಾಲ್ಕನೇ ವರ್ಷದ ಕೆಸರ್‌ಡೊಂಜಿ ದಿನ ಕಾರ್ಯಕ್ರಮ 20-07-2025ನೇ ಆದಿತ್ಯವಾರ ಇರಂದೂರು ಶ್ರೀ ನಾಗಬ್ರಹ್ಮ ಸನ್ನಿಧಿಯ ಎದುರಿನ ಗದ್ದೆಯಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ 9.00ಕ್ಕೆ ಅರ್ಚಕರು ಶ್ರೀ ಉದಯೇಶ ಕೆದಿಲಾಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸುರೇಶ ಗೌಡ ಎಸ್. ಯೋಜನಾಧಿಕಾರಿ ಶ್ರೀ ಕ್ಷೇ.ಧ.ಗ್ರಾ.. ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ತಾಲೂಕು, ವಿಶ್ವನಾಥ ನಾಯ್ತೊಟ್ಟು ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ, ವಿಟ್ಲ, ಶಿವರಾಮ ಕುಲಾಲ್, ಇರಂದೂರು ಅಧ್ಯಕ್ಷರು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ.) ಇರಂದೂರು-ಪಡೀಲ್, ವಿನೋದ್ ಶೆಟ್ಟಿ ಅಧ್ಯಕ್ಷರು ವಿನೂತನ ಯುವಕ ಮಂಡಲ (ರಿ.) ಬೊಳಂತಿಮೊಗರು, ಹೇಮಚಂದ್ರ ಅಧ್ಯಕ್ಷರು ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ, ಚಂದ್ರಶೇಖರ ಗೌರವಾಧ್ಯಕ್ಷರು ನವಚೇತನ ಗೆಳೆಯರ ಬಳಗ, ಇರಂದೂರು-ಪಡೀಲ್, ಚರಣ್ ಅಧ್ಯಕ್ಷರು ನವಚೇತನ ಗೆಳೆಯರ ಬಳಗ, ಇರಂದೂರು-ಪಡೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಮಕ್ಕಳಿಗೆ ಓಟ (5ರಿಂದ 10), ಬಾಲ್ ಪಾಸಿಂಗ್, ಹಾಳೆ ಎಳೆಯುವುದು, ಮಡಕೆ ಒಡೆಯುವುದು ಸ್ಪರ್ಧೆ ನಡೆಯಲಿದೆ.
ಮಹಿಳೆಯರಿಗೆ : ಓಟ, ಹಗ್ಗ ಜಗ್ಗಾಟ, ಬಾಲ್ ಪಾಸಿಂಗ್, ಹಾಳೆ ಎಳೆಯುವುದು, ಮಡಕೆ ಒಡೆಯುವುದು
ಪುರುಷರಿಗೆ : ಓಟ, ಹಗ್ಗ ಜಗ್ಗಾಟ, ಹಾಳೆ ಎಳೆಯುವುದು, ಮಡಕೆ ಒಡೆಯುವುದು, ವಾಲಿಬಾಲ್
ಸಾರ್ವಜನಿಕರಿಗೆ ನಿಧಿಶೋಧನೆಯನ್ನು ಆಯೋಜಿಸಲಾಗಿದೆ.
ಸಂಜೆ 5.00 ಗಂಟೆಗೆ ಕೃಷ್ಣಯ್ಯ ಬಲ್ಲಾಳ್ ವಿಟ್ಲ ಅರಮನೆ ಇವರ ಅzಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಶುಕರಾಜ್ ಮೇಲ್ವಿಚಾರಕರು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಕಲ್ಲಡ್ಕ ವಲಯ, ಕರುಣಾಕರ ನಾಯ್ತೊಟ್ಟು ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಶ್ರೀನಿವಾಸ ನೆಕ್ಕಿಲಾಯ ದೈಹಿಕ ಶಿಕ್ಷಣ ನಿರ್ದೇಶಕರು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಶ್ರೀಮತಿ ಚೈತ್ರ ಸಮುದಾಯ ಆರೋಗ್ಯ ಅಧಿಕಾರಿ-ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ನವಚೇತನ ಗೆಳೆಯರ ಬಳಗ ಮತ್ತು ಮಹಿಳಾ ಬಳಗ ಇರಂದೂರು-ಪಡೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








