Sunday, September 27, 2026
spot_imgspot_img
spot_imgspot_img

ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸಲಿರುವ ಗೆಜ್ಜೆನಾದ-3 ಏಕವ್ಯಕ್ತಿ ನೃತ್ಯ ಸ್ಪರ್ಧೆ

- Advertisement -
- Advertisement -

ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಕರಾವಳಿ ಕರ್ನಾಟಕದಾದ್ಯಂತ ಅಪಾರ ಜನಮನ್ನಣೆ ಪಡೆದಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡ ಇದೀಗ ತನ್ನ ಇನ್ನೊಂದು ಐತಿಹಾಸಿಕ ಹೆಜ್ಜೆಯನಿಡಲು ಮುಂದಾಗಿದೆ.

ಅದೆಷ್ಟೋ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವುದರ ಜೊತೆಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜನೆ ಮಾಡಿ ಜನಮನ್ನಣೆ ಪಡೆದಿದೆ.

ಕಳೆದ ವರ್ಷ ಜನವರಿ ಮತ್ತು ನವೆಂಬರ್ ತಿಂಗಳನಲ್ಲಿ ಒಂದೇ ವರ್ಷ ಎರಡು ಬಾರಿ ಗೆಜ್ಜೆನಾದ ನಾಮಾಂಕಿತ ಏಕವ್ಯಕ್ತಿ ಸ್ಪರ್ಧೆಯನ್ನು ಆಯೋಜಿಸಿದ ಕೀರ್ತಿ ತಂಡಕ್ಕೆ ಸಲ್ಲುತ್ತದೆ. ಇದೀಗ ಇದರ ಮುಂದಿನ ಭಾಗವಾಗಿ ಗೆಜ್ಜೆನಾದ ಸ್ಪರ್ಧೆಯ ಮೂರನೇ ಅವೃತ್ತಿ ನವೆಂಬರ್ 29/2026ರಂದು ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣರಂಗ ಮಂದಿರದಲ್ಲಿ ವೈಭವಯುತವಾಗಿ ನಡೆಯಲಿದೆ. ಈ ಅವೃತ್ತಿಯಲ್ಲಿ ವಿಶೇಷವಾಗಿ ಜೂನಿಯರ್ಸ್ ಮತ್ತು ಸೀನಿಯರ್ಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಬಹುಮಾನವಾಗಿ,

SENIORS ವಿಭಾಗ
ಪ್ರಥಮ : ರೂ. 10,000 ಮತ್ತು ಗೆಜ್ಜೆನಾದ ಟ್ರೋಫಿ
ದ್ವಿತೀಯ : ರೂ. 5,000 ಮತ್ತು ಗೆಜ್ಜೆನಾದ ಟ್ರೋಫಿ
ತೃತೀಯ : ರೂ. 3,000 ಮತ್ತು ಗೆಜ್ಜೆನಾದ ಟ್ರೋಫಿ
ಚತುರ್ಥ : ಗೆಜ್ಜೆನಾದ ಟ್ರೋಫಿ
ಪಂಚಮ : ಗೆಜ್ಜೆನಾದ ಟ್ರೋಫಿ

JUNIORS ವಿಭಾಗ(12 ವರ್ಷದ ಒಳಗಿನ ಮಕ್ಕಳಿಗೆ )
ಪ್ರಥಮ : ರೂ. 3,000 ಮತ್ತು ಗೆಜ್ಜೆನಾದ ಟ್ರೋಫಿ
ದ್ವಿತೀಯ : ರೂ. 2,000 ಮತ್ತು ಗೆಜ್ಜೆನಾದ ಟ್ರೋಫಿ

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು 20 ನವೆಂಬರ್ 2026ರ ಒಳಗೆ ಪ್ರವೇಶ ಶುಲ್ಕವನ್ನು (SENIORS ರೂ. 500/- JUNIORS ರೂ. 350/-) ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.

ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು :-

  • ಕಳೆದ ಎರಡು ಸೀಸನ್ ವಿಜೇತರಿಗೆ (ಪ್ರಥಮ)ಈ ಸೀಸನ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪರ್ಧಿಗಳು ನವೆಂಬರ್ 20-2026ರ ಒಳಗೆ ಪ್ರವೇಶ ಶುಲ್ಕವನ್ನು ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.ಹಾಗೆಯೇ JUNIORS ವಿಭಾಗದಲ್ಲಿ ಸ್ಪರ್ಧಿಸುವವರು ಆಧಾರ್ ಕಾರ್ಡ್ /ಶಾಲೆಯ ID ಫೋಟೋ ಕಳುಹಿಸಿಕೊಡತಕ್ಕದ್ದು ಹಾಗೆಯೇ ಸ್ಪರ್ಧೆಯ ದಿನದಂದು ತಂದು ತೋರಿಸಬೇಕು.
  • ಹೆಸರು ನೋಂದಾಯಿಸಿಕೊಳ್ಳುವ ಮೊದಲ 60 ಸ್ಪರ್ಧಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
  • ಸ್ಪರ್ಧೆಗೆ ಬಳಸುವ ಹಾಡು ಕನ್ನಡ ಅಥವಾ ತುಳು ಭಾಷೆಯಲ್ಲಿರಬೇಕು.ಇತರೆ ಭಾಷೆಯ (ಹಿಂದಿ, ತಮಿಳು, ಇಂಗ್ಲೀಷ್ ಇತ್ಯಾದಿ) ಹಾಡುಗಳನ್ನು ಬಳಸುವಂತಿಲ್ಲ.
  • ಜನಪದ ಹಾಡುಗಳು ಅಥವಾ ಭಕ್ತಿಗೀತೆಗಳನ್ನು ಸೇರಿಸಬಹುದು, ಆದರೆ ಅವು ಕೂಡ ಕನ್ನಡ/ತುಳು ಭಾಷೆಯಲ್ಲಿರಬೇಕು.
  • ಯಾವುದೇ ನೃತ್ಯ ಶೈಲಿಯನ್ನು ಬಳಸಬಹುದು – ಭರತನಾಟ್ಯ, ಪೋಕ್, ಫ್ರೀಸ್ಟೈಲ್, ಸೆಮಿ-ಕ್ಲಾಸಿಕಲ್, ವೆಸ್ಟರ್ನ್ ಅಥವಾ ಪ್ಯೂಶನ್ ಶೈಲಿಯಲ್ಲಿ ಸ್ವಾತಂತ್ರ್ಯ ವಿದೆ. ಆದರೆ ಹಾಡಿನ ಥೀಮ್ಗೆ ಹೊಂದಿಕೊಳ್ಳಬೇಕು.
  • ಪ್ರದರ್ಶನವು 4+1 ನಿಮಿಷಗಳಿಗೆ ಸೀಮಿತವಾಗಿರುತ್ತದೆ ಹಾಗೂ ವೇದಿಕೆಯಲ್ಲಿ ಸಿದ್ಧತೆಯನ್ನು ಮಾಡಲು ಹೆಚ್ಚುವರಿ 1 ನಿಮಿಷವನ್ನು ನೀಡಲಾಗುತ್ತದೆ.
  • ಯಾವುದೇ ರೀತಿಯ ಅಸಭ್ಯತೆ, ಅನುಚಿತ ಭಾಷೆ, ದೇವತೆಗಳು, ರಾಷ್ಟ್ರ, ಜಾತಿ ಅಥವಾ ಯಾವುದೇ ಸಮುದಾಯದ ಅವಹೇಳನಕಾರಿಯಾದ ವಿಷಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಸ್ಪರ್ಧಿಗಳು ಸ್ಪರ್ಧೆಗೆ 30 ನಿಮಿಷಗಳ ಮೊದಲು ಆಗಮಿಸಬೇಕಾಗುತ್ತದೆ. ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
  • ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಆಡಿಯೋ ಅಗತ್ಯಗಳಿಗಾಗಿ ಪೆನ್ ಡ್ರೈವ್‌ಗಳನ್ನು ಬಳಸಬೇಕಾಗುತ್ತದೆ. ಯಾವುದೇ ರೀತಿಯ ತಾಂತ್ರಿಕ ದೋಷಗಳು ಉಂಟಾದಲ್ಲಿ ಸಂಘಟಕರು ಜವಾಬ್ದಾರರಾಗಿರುವುದಿಲ್ಲ.
  • ಅಗತ್ಯ ಧ್ವನಿ ಮತ್ತು ಬೆಳಕಿನ ಸಾಧನಗಳನ್ನು ಒದಗಿಸಲಾಗುತ್ತದೆ.
  • ಅನುಚಿತ ವರ್ತನೆಯನ್ನು ಪ್ರದರ್ಶಿಸುವ ಸ್ಪರ್ಧಿಗಳು ಅನರ್ಹತೆಯನ್ನು ಎದುರಿಸಬೇಕಾಗುತ್ತದೆ.
  • ಬೆಂಕಿ ಅಥವಾ ಇತರ ಅಪಾಯಕಾರಿ ಸಾಧನಗಳನ್ನು ಬಳಸುವಂತಿಲ್ಲ.
  • ಪ್ರವೇಶ ಶುಲ್ಕವನ್ನು ನೀಡಿ ಸ್ಪರ್ಧಿಗಳು ಸ್ಪರ್ಧೆಗೆ ಭಾಗವಹಿಸದೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
  • ಸಂಘಟಕರ ಹಾಗೂ ತೀರ್ಪುಗಾರರ ನಿರ್ಧಾರಗಳೇ ಅಂತಿಮವಾಗಿರುತ್ತದೆ.

ಒಟ್ಟು 25ಅಂಕಗಳಲ್ಲಿ,ಸ್ಪರ್ಧಿಯ ಪ್ರದರ್ಶನ ನೋಡಿ ಕೆಳಗಿನಂತೆ ಅಂಕಗಳನ್ನು ಹಂಚಲಾಗುತ್ತದೆ.
ಸೃಜನಶೀಲತೆ : 05 ಅಂಕ
ಸಿಂಕ್ರೋನೈಸೇಶನ್/ ಸಮನ್ವಯತೆ : 05 ಅಂಕ
ವೇಷಭೂಷಣಗಳು, ರಂಗಪರಿಕರಗಳು: 05 ಅಂಕ
ಸಂದೇಶ : 05 ಅಂಕ
ನೃತ್ಯ ಮತ್ತು ಅಭಿವ್ಯಕ್ತಿ: 05 ಅಂಕ

ನೋಂದವಣೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7090615880

- Advertisement -

Related news

error: Content is protected !!