Wednesday, June 24, 2026
spot_imgspot_img
spot_imgspot_img

ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

- Advertisement -
- Advertisement -

ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ 2019-20ನೇ ಸಾಲಿನ ಮಹಾಸಭೆಯು ನ. 24ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಸಿ.ಎಚ್. ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

2019-20ನೇ ಸಾಲಿನಲ್ಲಿ ರೂ. 4,18,327.87 ನಿವ್ವಳ ಲಾಭ ಗಳಿಸಿದ್ದು, ಶೇ. 18% ಡಿವಿಡೆಂಡ್ ಮತ್ತು ಲೀಟರ್‍ ಹಾಲಿಗೆ 0.69 ಪೈಸೆಯಂತೆ ಬೋನಸ್ ವಿತರಣೆ ಮಾಡಲಾಯಿತು. ವಿಸ್ತರಣಾಧಿಕಾರಿಗಳಾದ ಜಗದೀಶ್, ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಸಂಘದ ನಿರ್ದೇಶಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಜನಾರ್ಧನ ಪೆರಾಜೆ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವರದಿ ವಾಚಿಸಿದರು. ಸಂಘದ ಸಿಬ್ಬಂದಿ ನಾಗೇಶ್ ಎಂ. ವಂದಿಸಿದರು.

- Advertisement -

Related news

error: Content is protected !!