Sunday, August 2, 2026
spot_imgspot_img
spot_imgspot_img

ಮಂಗಳೂರು: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು..!

- Advertisement -
- Advertisement -

ಮಂಗಳೂರು: ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕೋಟೆಪುರ ನಿವಾಸಿ, ಉದ್ಯಮಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಸುಂದರಿಬಾಗ್ ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಉಳ್ಳಾಲ ಕೋಟೆಪುರ ನಿವಾಸಿ, ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47) ಯಾನೆ ಕಮಾಲ್ ಎಂದು ಗುರುತಿಸಲಾಗಿದೆ.

ಮಂಗಳೂರು ಧಕ್ಕೆಯಲ್ಲಿ ಮೀನು ವ್ಯವಹಾರ ನಡೆಸುತ್ತಿದ್ದ ಅವರು ಸಂಜೆ ವೇಳೆ ತೊಕ್ಕೊಟ್ಟು ಕಡೆಯಿಂದ ಮನೆ ಕಡೆಗೆ ಪುತ್ರನನ್ನು ಕುಳ್ಳಿರಿಸಿ ಸ್ಕೂಟರಿನಲ್ಲಿ ತೆರಳುವ ಸಂದರ್ಭ, ಆಯತಪ್ಪಿ ಸ್ಕೂಟರ್ ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇಬ್ರಾಹಿಂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!