
ಕುಂಡಡ್ಕ: ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಬೆಳ್ಳಾರೆ ಶಾಖೆ ಇದರ ಸೀನಿಯರ್ ಮೆನೇಜರ್ ಚಂದ್ರಹಾಸ ಶೆಟ್ಟಿ ಪಿಲಿಂಜ ರವರು ಧ್ವಜಾರೋಹಣಗೈದರು. ಕುಂಡಡ್ಕ ವಿಷ್ಣುಮೂರ್ತಿ ಯುವಕ ಮಂಡಲ ಅಧ್ಯಕ್ಷ ಮನೋಜ್ ಕಂಪ, ನಿವೃತ್ತ ಎ.ಎಸ್.ಐ ಕೇಪು ಗೌಡ, ಶಾಲಾ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ, ಕುಳ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ ಬರೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿದ್ದ ಚಂದ್ರಹಾಸ ಶೆಟ್ಟಿ ಪಿಲಿಂಜ ಮಾತನಾಡಿ “ಎಳವೆಯಿಂದಲೇ ದೇಶಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ಮೈಗೂಡಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು” ಎಂದು ನುಡಿದರು. ಮುಖ್ಯ ಶಿಕ್ಷಕ ಪ್ರವೀಣ್ ಶೆಟ್ಟಿ ಮೈರ ಸ್ವಾಗತಿಸಿ, ಶಿಕ್ಷಕಿ ಶ್ರೀನಿಧಿ ವಂದಿಸಿದರು. ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು, ವಿವಿಧ ಯುವಕ ಮಂಡಲಗಳ ಸದಸ್ಯರು ,ಸ್ಥಳೀಯ ಅಂಗನವಾಡಿ ಪುಟಾಣಿಗಳು ಮತ್ತು ಕಾರ್ಯಕರ್ತೆಯರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಥಳೀಯ ಯುವಕ ಮಂಡಲಗಳು, ಕುಳ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್, ಇಡ್ಕಿದು ಸೊಸೈಟಿ ಮತ್ತು ಹಲವಾರು ವಿದ್ಯಾಭಿಮಾನಿಗಳು ನೀಡಿದ ಸಿಹಿತಿಂಡಿಯನ್ನು ಹಂಚಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ನಡೆಯಿತು.








