Saturday, July 25, 2026
spot_imgspot_img
spot_imgspot_img

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ವಿಟ್ಲ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

- Advertisement -
- Advertisement -

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಿಟ್ಲ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಚಂದಳಿಕೆ ಭಾರತ್ ಅಡಿಟೋರಿಯಂನಲ್ಲಿ ಮಂಗಳವಾರ ನಡೆಯಿತು.

ವೇದಿಕೆಯಲ್ಲಿರುವ ಅತಿಥಿಗಳು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಟ್ಲ ಠಾಣಾಧಿಕಾರಿ ರಾಮಕೃಷ್ಣ ಅವರು ಮಾತನಾಡಿ ನಮ್ಮ ಹಕ್ಕನ್ನು ಪಡೆಯಲು ಸಂಘಟನೆ ಮತ್ತು ಶಿಕ್ಷಣ ಮೂಲಕ ಸಾಧ್ಯ. ಎಲ್ಲರೂ ಒಗ್ಗಟ್ಟಾಗಿ ಬೆಳೆಯಲು ಸಂಘಟನೆಗಳು ಪ್ರೇರಣೆಯಾಗಿದೆ. ಶಾಮಿಯಾನ ಕೆಲಸ ಮಾಡುವವರು ಮುಂಜಾಗ್ರತಾ ಅಗತ್ಯವಾಗಿದೆ. ಸುರಕ್ಷತಾ ಕ್ರಮಗಳನ್ನು ಕೆಲಸ ಮಾಡಬೇಕು. ಸೈಬರ್ ಅಪರಾಧಗಳು ಎಲ್ಲ ಕಡೆ ನಡೆಯುತ್ತಿದ್ದು, ಇದನ್ನು ತಡೆಯಲು ಮುಂದಾಗಬೇಕು. ಕೆವೈಸಿ ಮೊದಲಾದ ಬಗ್ಗೆ ಕರೆ ಬಂದಾಗ ಪ್ರತಿಕ್ರಿಯೆ ನೀಡಬಾರದು. ವಿವಿಧ ಆಮೀಷಗಳನ್ನು ಒಡ್ಡಿ ಮೊಬೈಲ್ ಮೂಲಕ ಲಿಂಕ್ ಬಗ್ಗೆ ಜಾಗೃತರಾಗಬೇಕು. ಹಣ ಹೂಡುವ ಬಗ್ಗೆ ಜನರು ಜಾಗೃತರಾಗಬೇಕು ಎಂದು ತಿಳಿಸಿದರು.

ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ನೋಟರಿ ವಕೀಲ ಅಬೂಬಕ್ಕರ್ ವಿಟ್ಲ, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಕಾರ್ಯದರ್ಶಿ ಪಿಯೂಷ್ ಮ್ಯಾಕ್ಸಿಮ್ ಸಿಕ್ವೇರಾ, ಕೋಶಾಧಿಕಾರಿ ನಿಶಿತ್ ಪೂಜಾರಿ, ವಿಟ್ಲ ಘಟಕದ ನೂತನ ಗೌರವಾಧ್ಯಕ್ಷ ಚಂದ್ರಹಾಸ ಸುವರ್ಣ, ಅಧ್ಯಕ್ಷ ಪದ್ಮನಾಭ ಶೆಟ್ಟಿ ಕಲ್ಕಾಜೆ, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕುಂಡಡ್ಕ, ಕೋಶಾಧಿಕಾರಿ ದಿನೇಶ್ ಪುಣಚ, ಉಪಸ್ಥಿತರಿದ್ದರು.

ಭಾರತ್ ಆಡಿಟೋಯಂನ ಸಂಜೀವ ಪೂಜಾರಿ ಸ್ವಾಗತಿಸಿ, ರಾಜಶೇಖರ್ ಶೆಟ್ಟಿ ವಂದಿಸಿದರು. ಇಸ್ಮಾಯಿಲ್ ಬನಾರಿ ನಿರೂಪಿಸಿದರು.

- Advertisement -

Related news

error: Content is protected !!