Thursday, July 23, 2026
spot_imgspot_img
spot_imgspot_img

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ವಿಂಧ್ಯಾ ಎಸ್.ರೈ, ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಮೂಡಬಿದ್ರೆ ಆಯ್ಕೆ

- Advertisement -
- Advertisement -

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ಮಹಾಸಭೆಆಗಸ್ಟ್ ೧೭ ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಆಮಂತ್ರಣ ಪರಿವಾರದ ಜಿಲ್ಲಾಧ್ಯಕ್ಷರಾದನಿರೀಕ್ಷಿತಾ ಮಂಗಳೂರು ವಹಿಸಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತಾನಾಡಿಒಂದು ವರ್ಷದ ಕಾರ್ಯಕ್ರಮ ಪ್ರಗತಿ ಮತ್ತು ಎಲ್ಲಾ ಪದಾಧಿಕಾರಿಗಳ ಸರ್ವ ರೀತಿಯ ಸಹಕಾರವನ್ನು ನೆನೆದು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೂತನ ಸಮಿತಿ ರಚಿಸುವ ಬಗ್ಗೆ ಮಾತಾನಾಡಿ ಅಭಿಪ್ರಾಯ ಪಡೆಯಲಾಯಿತು.

ಜಿಲ್ಲಾಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮುಂದಿನ ಬದಲಾವಣೆ ಕುರಿತು ಒಪ್ಪಿಗೆ ಸೂಚಿಸಿ ಈವರೆಗೆ ಎಲ್ಲರೂ ತಮ್ಮ ಮನೆಯವರಂತೆಪ್ರೀತಿಯ ಸಹಕಾರವನ್ನು ಸ್ಮರಿಸಿ ಮುಂದೆಯೂ ಉತ್ತಮ ಸಹಕಾರ ನೀಡುವುದಾಗಿ ತಿಳಿಸಿದರು.

ದ.ಕನ್ನಡ ಮಂಗಳೂರು ಜಿಲ್ಲೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಅನುಭವಿ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿ ಗಳು ಆಗಿರುವ ವಿಂಧ್ಯಾ ಎಸ್ ರೈ ಕಡೇಶಿವಾಲಯ,ಉಪಾಧ್ಯಕ್ಷ ರಾಗಿ ಉಪನ್ಯಾಸಕಿ ಹಾಗೂ ಸಾಹಿತಿ ಅನಿತಾ ಶೆಟ್ಟಿ ಮೂಡಬಿದ್ರೆ ಆಯ್ಕೆಯಾಗಿದ್ದಾರೆ.

ವಿಂಧ್ಯಾ ಎಸ್.ರೈ ಈವರೆಗೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ಕರ್ನಾಟಕ ಜಿಲ್ಲೆಯಉಪಾಧ್ಯಕ್ಷರಾಗಿದ್ದರು. ಅನಿತಾ ಶೆಟ್ಟಿ ಮೂಡುಬಿದಿರೆ ಆಮಂತ್ರಣ ತಾಲೂಕು ವೇದಿಕೆ ಉಪಾಧ್ಯಕ್ಷರಾಗಿಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಆಯ್ಕೆಯ ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳಾದಹೆಚ್ಕೆ ನಯನಾಡು, ಆಶಾ ಅಡೂರು, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆವಿದ್ಯಾಶ್ರೀ ಅಡೂರು, ಬಂಟ್ವಾಳ ತಾಲೂಕು ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು,ಮೂಡಬಿದ್ರೆ ತಾಲೂಕು ಅಧ್ಯಕ್ಷೆ ಕವಿತಾ ದಿನೇಶ್ ಕಟೀಲ್, ಕಾರ್ಯದರ್ಶಿ ಸುಶ್ಮಿತಾ ಆರ್, ಲೋಲಾಕ್ಷಿ ಶೆಟ್ಟಿ, ಪ್ರಕಾಶ್ ಆಚಾರ್ಯ, ಬಂಟ್ವಾಳ ಘಟಕದ ರೂಪೇಶ್ ಕುಮಾರ್,ರಾಕೇಶ್ ಪೊಳಲಿ, ಪ್ರಸಾದ್ ನಾಯಕ್ ಕಾರ್ಕಳ, ವಿಜಯಚಂದ್ರ ಮುಂಡ್ಲಿ, ಅನ್ನಪೂರ್ಣ ಶ್ಯಾನುಭೋಗ್ ಅಂಬಲಪಾಡಿ, ಅಕ್ಷತಾ ಅಡೂರು, ಸರೀನ್ ತಾಜ್ ಕಾಶಿಪಟ್ಣ, ದೀಕ್ಷಾ ಕಾಶಿಪಟ್ಣ ಭಾಗವಹಿಸಿದ್ದರು.

- Advertisement -

Related news

error: Content is protected !!