




ವಿಟ್ಲ: ಕಲಾಪೋಷಕರು ವಿಟ್ಲ ಇವರ ಆಶ್ರಯದಲ್ಲಿ ದಿವ್ಯಜ್ಯೋತಿ ಕಲಾವಿದೆರ್, ಎರುಂಬು-ಅಳಿಕೆ ಅಭಿನಯದ ಮೋಹನ್ದಾಸ್ ರೈ ಎರುಂಬು ನಿರ್ದೇಶನದ “ಮದಿಮೆದ ಇಲ್ಲಡ್” ಎಂಬ ತುಳು ಹಾಸ್ಯಮಯ ನಾಟಕ ಆ.31-8-2025ನೇ ಆದಿತ್ಯವಾರ ಸಂಜೆ 6:00 ಗಂಟೆಗೆ ವಿಟ್ಲ ಭಾರತ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಟ್ಲ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ, ಉದ್ಯಮಿ ಮತ್ತು ಕೃಷಿಕ ಕಲಾಬಂಧು ಶ್ರೀಧರ ಶೆಟ್ಟಿ ಗುಬ್ಯ, ವಿಟ್ಲ ನಿವೃತ್ತ ಪ್ರಾಧ್ಯಾಪಕ ಸಿ. ಯಚ್. ಸುಬ್ರಮಣ್ಯ ಭಟ್, ವಿಟ್ಲ ಛೇರ್ಮನ್ ದಿಗ್ವಿಜಯ ಗ್ರೂಪ್ಸ್ ಪ್ರೈ. ಲಿಮಿಟೆಡ್ ದಿನಕರ ಭಟ್ ಮಾವೆ, ವಿಟ್ಲ ಶ್ರೀನಿವಾಸ ನಾಯಕ್ ಟ್ರೇಡರ್ಸ್ ಮಾಲಕ ಸುಭಾಸ್ ನಾಯಕ್, ವಿಟ್ಲ ಪ್ರಭಾ ವೈನ್ಸ್ ಮಾಲಕ ಪ್ರಭಾಕರ್ ಶೆಟ್ಟಿ ದಂಬೆಕಾನ ಕಾಟುಕುಕ್ಕೆ, ವಿಟ್ಲ ಶ್ರೀ ದುರ್ಗಾಪರಮೇಶ್ವರಿ ರೋಡ್ ಲೈನ್ಸ್ ಮಾಲಕ ಸಂಜೀವ ಪೂಜಾರಿ, ಸೂರ್ಯ ಕ್ಯಾಟರರ್ಸ್ ವಿಟ್ಲ ಭಾಸ್ಕರ ಶೆಟ್ಟಿ, ರಾಮ್ದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ವಿಟ್ಲ ಹಿರಿಯ RSS ಕಾರ್ಯಕರ್ತ ನಿತ್ಯಾನಂದ ನಾಯಕ್, ವಿಟ್ಲ ಕಲಾ ಮತ್ತು ಶೈಕ್ಷಣಿಕ ಪೋಷಕ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಸಮಾಜಮುಖಿ ಸೇವಕ ಮುರಳೀಧರ ವಿಟ್ಲ, , ಹಿರಿಯ ನಾಟಕ ಕಲಾವಿದ, ಸಂಘಟಕ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬರಹಗಾರ, ಕಲಾವಿದ, ಸಮಾಜ ಸೇವಕ, ಸಂಘಟಕ ರಾಧಾಕೃಷ್ಣ ಕುಲಾಲ್ ಎರುಂಬು ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದು.









