Saturday, September 5, 2026
spot_imgspot_img
spot_imgspot_img

ಮಂಗಳೂರು:ಮಾದಕ ವಸ್ತು ಸಾಗಾಟ ಮತ್ತು ಮಾರಾಟ

- Advertisement -
- Advertisement -

ಆರೋಪಿಗಳಿಬ್ಬರ ಬಂಧನ

ಮಂಗಳೂರು:ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ನಡೆಸುತ್ತಿದ್ದ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಸೆರೆ ಹಿಡಿದು, ಗಾಂಜಾ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಣಂಬೂರು ಠಾಣಾ ಪಿಎಸ್‌ಐ ಜ್ಞಾನಶೇಖರರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ, ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಹಾಗೂ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ, ಸೆಪ್ಟೆಂಬರ್ 1 ರಂದು ಸಂಜೆ 4.40ಕ್ಕೆ ತೋಕೂರು ರೈಲ್ವೇ ಸ್ಟೇಷನ್ ಹತ್ತಿರ ದಾಳಿ ನಡೆಸಲಾಯಿತು.

ಈ ವೇಳೆ, ಆರೋಪಿಗಳಾದ ಹರ್ಷ ಕುಮಾರ್ (22) ಎಂಬಾತನಿಂದ 1 ಕೆ.ಜಿ 230 ಗ್ರಾಂ ಗಾಂಜಾ ಹಾಗೂ ಅಮರ್ ಕುಮಾರ್ (28) ಎಂಬಾತನಿಂದ 80 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಯಿತು.ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹75,000 ಎಂದು ಅಂದಾಜಿಸಲಾಗಿದೆ.ಆರೋಪಿಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಬಳಸುತ್ತಿದ್ದ ಎರಡು ಮೊಬೈಲ್‌ಗಳನ್ನು ಸಹ ಪೊಲೀಸರು ಕಬಳಿಸಿದ್ದಾರೆ.ಪತ್ತೆಯಾದ ಇಬ್ಬರೂ ಆರೋಪಿಗಳು ಬಿಹಾರ ರಾಜ್ಯದವರು. ಹರ್ಷ ಕುಮಾರ್ ಪಟ್ನಾದಲ್ಲಿ ಮೀಶೋ ಮತ್ತು ಪ್ಲಿಪ್‌ಕಾರ್ಟ್ ಹಬ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಮರ್ ಕುಮಾರ್ ದೆಹಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಕ್ರಮ ನಂಬರ್ 75/2025, ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(B) ರಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!