



ಸುರತ್ಕಲ್: ಕಾಲೇಜಿಗೆಂದು ಹೋದ ಕಾಟಿಪಳ್ಳದ ಯುವತಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದೆ.ನಾಪತ್ತೆಯಾದ ಯುವತಿ ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ(18) ಎಂದು ತಿಳಿದು ಬಂದಿದೆ.
ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದು, ಸೆ.1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವತಿ ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿರುತ್ತಾರೆ.
ಕನ್ನಡ, ತುಳು, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.ನಾಪತ್ತೆಯಾದ ದಿನ ಬ್ಲೂ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತ್ರ ಶರ್ಟ್ ಹಾಗೂ ಕಪ್ಪು ಬಣ್ಣದ ಕಾಲೇಜು ಸಮವಸ್ತ್ರ ಪ್ಯಾಂಟ್ ಧರಿಸಿದ್ದರು ಎಂದು ತಿಳಿದು ಬಂದಿದೆ.
ನಾಪತ್ತೆಯಾದ ಯುವತಿಯ ಗುರುತು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








