ಅಧ್ಯಕ್ಷರಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಮೋಹನ್ ಆಯ್ಕೆ
ಪುತ್ತೂರಿನಲ್ಲಿ ಮಾತ್ರವಲ್ಲದೆ ಹತ್ತೂರಲ್ಲೂ “ಐಕ್ಯ ಕಲಾ-ಸೇವಾ ಟ್ರಸ್ಟ್” ನ ಹೆಸರು ಹರಡಬೇಕು- ಡಾ. ಸುರೇಶ್ ಪುತ್ತೂರಾಯ



ಪುತ್ತೂರು: ಐಕ್ಯ ಕಲಾ-ಸೇವಾ ಟ್ರಸ್ಟ್ (ರಿ.) ಪುತ್ತೂರು ಇದರ ವಾರ್ಷಿಕ ಮಹಾಸಭೆಯು ರೋಟರಿ ಸಭಾಭವನದಲ್ಲಿ ದಿನಾಂಕ 7-9-2025ನೇ ಆದಿತ್ಯವಾರದಂದು ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರಿನ ಖ್ಯಾತ ವೈದ್ಯರು ಹಾಗೂ ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ “ಡಾ. ಸುರೇಶ್ ಪುತ್ತೂರಾಯ” ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿ ‘ ಈ ಒಂದು ಯುವಕರ ತಂಡ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಪುತ್ತೂರಿನಲ್ಲಿ ಮಾತ್ರವಲ್ಲದೆ ಹತ್ತೂರಲ್ಲೂ “ಐಕ್ಯ ಕಲಾ-ಸೇವಾ ಟ್ರಸ್ಟ್” ನ ಹೆಸರು ಹರಡಬೇಕೆಂದು ಶುಭ ಹಾರೈಸಿದರು.

ನಂತರ ಜೆ ಸಿ ಐ ಇಂಡಿಯಾ ತರಬೇತುದಾರರು, ಮೃದು ಕೌಶಲ್ಯ ತರಬೇತುದಾರ ಜೆಎಫ್ ಡಿ ದಾಮೋದರ ಪಾಟಾಳಿ” ಇವರಿಂದ “ವ್ಯಕ್ತಿತ್ವ ವಿಕಸನ, ನಾಯಕತ್ವ, ಟ್ರಸ್ಟ್ ನ ಜವಾಬ್ದಾರಿ”ಗಳ ಮಾಹಿತಿ ತರಬೇತಿ ಕಾರ್ಯಗಾರ ನಡೆಯಿತು.
ಅಧ್ಯಕ್ಷರಾದ ಚೇತನ್ ಕುಮಾರ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ದಕ್ಷಿತ್ ಎಸ್ ಯಂ ರವರು ವರದಿ ವಾಚಿಸಿದರು. ಹಾಗೂ ಕಾರ್ತಿಕ್ ಕೆ ಇವರು ಲೆಕ್ಕಪತ್ರ ಮಂಡಿಸಿದರು.
ಪ್ರಸಕ್ತ 2025-26 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕೃಯೆಯಲ್ಲಿ ಅಧ್ಯಕ್ಷರಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಮೋಹನ್ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕಾವ್ಯ ಮಿಥುನ್, ಖಜಾಂಜಿಯಾಗಿ ಕಾರ್ತಿಕ್ ಕೆ, ಲೆಕ್ಕ ಪರಿಶೋಧಕರಾಗಿ ದಕ್ಷಿತ್ ಎಸ್ ಎಂ, ಸಂಚಾಲಕರಾಗಿ ಉತ್ತೇಶ್ ಬಿ, ಅವಿನಾಶ್ ವಿ ಆರ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಿಯಾಂಕ ಮೋಹನ್ ರವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.








