


ವಿಟ್ಲ: ಜಲ ಜೀವನ ಮಿಷನ್ ಹಾಗೂ ನಲ್ ಜಲ್ ಮಿತ್ರ ಯೋಜನೆಯಡಿ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯಿತಿ ಮೂಲಕ ಆಯ್ಕೆಯಾದ ಮಹಿಳಾ ಸದಸ್ಯರಿಗಾಗಿ 17 ದಿನಗಳ ಬಹುಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ವಿಟ್ಲ ಸರಕಾರಿ ಐಟಿಐ ಯಲ್ಲಿ ಸೋಮವಾರದಿಂದ ಪ್ರಾರಂಭಿಸಲಾಯಿತು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಮಂಗಳೂರು ಸಹಾಯಕ ನಿರ್ದೇಶಕಿ ಸತ್ಯಲತಾ ಸತ್ಯಲತಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ “ಈ ತರಬೇತಿಯಲ್ಲಿ ಮಹಿಳೆಯರು ನೀರು ನಿರ್ವಹಣೆ, ಸ್ವಚ್ಛತೆ, ಪೈಪ್ ಲೈನ್ ನಿರ್ವಹಣೆ, ಮನೆ ಮನೆ ನೀರು ಸರಬರಾಜು, ಆರೋಗ್ಯಕರ ನೀರಿನ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾರ್ಗದರ್ಶನ ಪಡೆಯಲಿದ್ದಾರೆ” ಎಂದು ತಿಳಿಸಿದರು.

ಸಂಸ್ಥೆಯ ಪ್ರಾಚಾರ್ಯ ಹರೀಶ್ ಸಭಾ ಅಧ್ಯಕ್ಷತೆಯನ್ನು ವಹಿಸಿ “ಸರಕಾರದ ಎಲ್ಲಾ ಕೆಲಸಗಳಲ್ಲಿಯೂ ಮಹಿಳೆಯರನ್ನು ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ” ನಲ್ ಜಲ್ ಮಿತ್ರ” ಕಾರ್ಯಕ್ರಮದಡಿ ಬಹುಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಲು” ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಸಹಾಯಕ ಸಂಖಿಕಾ ಅಧಿಕಾರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಮಂಗಳೂರು ಪ್ರದೀಪ್ ಕಾಮತ್ ತಾಲೂಕು ವ್ಯವಸ್ಥಾಪಕರು NRLM ಬಂಟ್ವಾಳ ತಾಲೂಕು, ಶರತ್ ಕುಮಾರ್ ಎಸ್ ಹೆಚ್ ನಲ್ ಜಲ್ ಟ್ರೈನರ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಮತಿ ರತಿ ವಿ ಕಾರ್ಯಕ್ರಮ ನಿರೂಪಿಸಿದರು ತೀರ್ಥಾಕ್ಷೀ ಏನ್ ವಂದಿಸಿದರು.









