- Advertisement -
- Advertisement -
ನಿಮ್ಮ ಮನೆಯಲ್ಲಿ ಪ್ರತೀ ನಿತ್ಯ ಎಲ್ಲರೂ ಸೇರಿ ಭಜನೆ ಮಾಡುತ್ತೀರಾ? ಹಾಗಾದ್ರೆ ಕುಟುಂಬದ ಜೊತೆ ಸೇರಿ ಭಜನೆ ಹಾಡಿ ಬಹುಮಾನ ಗೆಲ್ಲಿ..


ವಿಟ್ಲ: ನವಿಲು ಬಸದಿ ವಿಟ್ಲ ಆಶ್ರಯದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ ”ಕುಟುಂಬ ಭಕ್ತಿಗಾನ ಸಮ್ಮಿಲನ” ಸ್ಪರ್ಧೆ ನಡೆಯಲಿದೆ.
ನಿಮ್ಮ ಮನೆಯಲ್ಲಿ ಪ್ರತೀ ನಿತ್ಯ ಎಲ್ಲರೂ ಸೇರಿ ಭಜನೆ ಮಾಡುತ್ತೀರಾ? ಹಾಗಾದ್ರೆ ಕುಟುಂಬದ ಜೊತೆ ಸೇರಿ ಭಜನೆ ಮಾಡುವ ಸದಸ್ಯರಿಗೆ ಇಲ್ಲಿದೆ ಉತ್ತಮ ವೇದಿಕೆ. ನಿಮ್ಮ ಮನೆಯವರ ಜೊತೆ ಭಜನೆ ಹಾಡಿ ಬಹುಮಾನ ಗೆಲ್ಲಿ..

ಭಾಗವಹಿಸಲು ನಿಯಮಗಳು:
- ಒಂದು ತಂಡದಲ್ಲಿ ಕನಿಷ್ಠ 2 ಅಥವಾ 6 ಸದಸ್ಯರು ಭಾಗವಹಿಸಬಹುದು.
- ಒಂದು ತಂಡದಲ್ಲಿ ಒಂದೇ ಮನೆಯ ತಂದೆ-ತಾಯಿ, ಮಕ್ಕಳು ಅಜ್ಜ-ಅಜ್ಜಿಯಂದಿರು ಮಾತ್ರ ಭಾಗವಹಿಸಬಹುದು.
- ಚಿಕ್ಕಪ್ಪ-ಮಾವ ಹಾಗೂ ಇನ್ಯಾವುದೇ ಸಂಬಂಧಿಕರು ಭಾಗವಹಿಸುವಂತಿಲ್ಲ.
- ಯಾವುದೇ ಭಾಷೆಯ ದೇವರ ನಾಮ (ಭಕ್ತಿಗೀತೆ)ಗಳನ್ನು ಮಾತ್ರ ಹಾಡಬೇಕು.
- ಹಾಡಲು ಕಾಲಮಿತಿ ಒಟ್ಟು 3 ನಿಮಿಷ.
- ಒಂದು ತಂಡದಲ್ಲಿ ಭಾಗವಹಿಸಿದ ಸದಸ್ಯರಿಗೆ ಬೇರೆ ಯಾವುದೇ ತಂಡಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ.
- ಸಂಗೀತ ಪರಿಕರಗಳನ್ನು ಉಪಯೋಗಿಸಬಹುದು.
- ಲ್ಯಾಂಡ್‌ಸ್ಕೇಪ್ ಮಾದರಿಯಲ್ಲಿ ವೀಡಿಯೋ ಚಿತ್ರೀಕರಿಸಿ, ಸೆ. 25 ರ ಒಳಗಾಗಿ 9902758020 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
- ಹಾಡುವ ಮೊದಲು ತಾವು ಕುಟುಂಬದಲ್ಲಿ ಯಾವ ಸದಸ್ಯರೆಂದು ಪರಿಚಯಿಸಿ ಗಾಯನ ಪ್ರಾರಂಭಿಸಿ ವೀಡಿಯೋ ಚಿತ್ರೀಕರಿಸಿ ಕಳುಹಿಸಿ.
- ತೀರ್ಪುಗಾರರ ತೀರ್ಮಾನದ ಮೇರೆಗೆ 35 ತಂಡಗಳನ್ನು ಆಯ್ಕೆ ಮಾಡಲಾಗುವುದು.
- ಆಯ್ಕೆಯಾದ ತಂಡಗಳಿಗೆ ಫೋನ್ ಮುಖಾಂತರ ತಿಳಿಸಲಾಗುವುದು.
- ಆಯ್ಕೆಯಾದ ತಂಡಗಳಿಗೆ ಅಕ್ಟೋಬರ್ 5 ನೇ ಆದಿತ್ಯವಾರದಂದು ವಿಟ್ಲ ನವಿಲು ಬಸದಿಯಲ್ಲಿ ತೀರ್ಪುಗಾರರ ಸಮ್ಮುಖದಲ್ಲಿ ಅದ್ದೂರಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು.
- ಅ. 5 ರಂದು ನಡೆಯುವ ಆಯ್ಕೆಯಾದ ತಂಡಗಳ ಸ್ಪರ್ಧೆಗೆ ಸಂಗೀತ ಪರಿಕರಗಳ ವ್ಯವಸ್ಥೆಯನ್ನು ಆಯೋಜಕರೇ ಒದಗಿಸಲಾಗುವುದು.
ವಿಜೇತರಿಗೆ
ಪ್ರಥಮ ಬಹುಮಾನ: 11,111/-ರೂ. ನಗದು ಹಾಗೂ ಫಲಕ
ದ್ವಿತೀಯ ಬಹುಮಾನ: 9,999/- ರೂ. ನಗದು ಹಾಗೂ ಫಲಕ
ತೃತೀಯ ಬಹುಮಾನ: 7,777/- ರೂ. ನಗದು ಹಾಗೂ ಫಲಕ
ನಾಲ್ಕನೇ ಬಹುಮಾನ: 4,444/- ರೂ. ನಗದು ಹಾಗೂ ಫಲಕ
ಐದನೇ ಬಹುಮಾನ: 3,333/- ರೂ. ನಗದು ಹಾಗೂ ಫಲಕ
ಆರನೇ ಬಹುಮಾನ: 2,222/- ರೂ. ನಗದು ಹಾಗೂ ಫಲಕ
ನೀಡಲಾಗುವುದು.
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- 9740888907, 8431114626
- Advertisement -








