- Advertisement -
- Advertisement -




ವಿಟ್ಲ ವಿಠಲ ಜಿಎಸ್‌ಬಿ ಸೌಹಾರ್ದ ಸಹಕಾರಿ ಸಂಘ ಇದರ 2024-25ನೇ ಸಾಲಿನ 6ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ ರಾಧಾಕೃಷ್ಣ ಪೈ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೆಕ್ಕ ಪತ್ರ ಮಂಡಿಸಿ ಸಂಘವು ಪ್ರಸಕ್ತ ವರ್ಷ 66,82,19,992 ರೂ ವ್ಯವಹಾರ ನಡೆಸಿ, 8,88,021 ರೂ ಲಾಭಗಳಿಸಿರುತ್ತದೆ. ಸದಸ್ಯರಿಗೆ 10 ಶೇಕಡಾ ಡಿವಿಡೆಂಡ್ ವಿತರಿಸಲಾಗುವುದು ಎಂದರು.
ನಿರ್ದೇಶಕರುಗಳಾದ ಸುಬ್ರಾಯ ಪೈ, ನವನೀತ ಭಟ್, ರಾಧಾಕೃಷ್ಣ ನಾಯಕ್, ಮುರಳೀಧರ ಭಟ್, ನಿತ್ಯಾನಂದ ನಾಯಕ್, ಹರೀಶ್ ನಾಯಕ್, ಶ್ರೀಧರ್ ಪೈ, ವೀಣಾ ಪೈ ಮತ್ತು ಪ್ರೀತಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ರಾಮದಾಸ ಶೆಣೈ ಸ್ವಾಗತಿಸಿ, ಉಪಾಧ್ಯಕ್ಷ ಸುಭಾಷ್ ಚಂದ್ರ ನಾಯಕ್ ವಂದಿಸಿದರು. ನಿರ್ದೇಶಕ ಕೊಪ್ಪ ಕೃಷ್ಣ ಪ್ರಸಾದ್ ಶೆಣೈ ನಿರೂಪಿಸಿದರು.
- Advertisement -








