Tuesday, June 23, 2026
spot_imgspot_img
spot_imgspot_img

ವಿಟ್ಲ: (ಅ.19) ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಮಾರ್ಗದರ್ಶನದಲ್ಲಿ “ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ”

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ವಿಟ್ಲ ಇದರ ಆಶ್ರಯದಲ್ಲಿ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ.(ರಿ.) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ಬಂಟ್ವಾಳ ವಲಯ, ರೋಟರಿ ಕ್ಲಬ್‌ವಿಟ್ಲ ಇವುಗಳ ಸಹಕಾರದೊಂದಿಗೆ ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಪುತ್ತೂರು ಹಾಗೂ ಯೇನೆಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ ಮಂಗಳೂರು ಇದರ ತಜ್ಞ ವೈದ್ಯರಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ “ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ”ವು ವಿಟ್ಲ ಶಾಂತಿನಗರ ಅಕ್ಷಯ ಸಭಾ ಭವನದಲ್ಲಿ ದಿನಾಂಕ 19-10-2025ನೇ ಭಾನುವಾರ ನಡೆಯಲಿದೆ.

ಈ ಸಂದರ್ಭದಲ್ಲಿ ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಲಭ್ಯ ಕನ್ನಡಕ ಮತ್ತು ಔಷಧಗಳನ್ನು ಉಚಿತವಾಗಿ ನೀಡಲಾಗುವುದು.

ಪೊರೆ ರೋಗಿಗಳಿಗೆ ಸೂಚನೆ:
ಕಣ್ಣಿನ ಪೊರೆ ಕಂಡು ಬಂದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೂರು ದಿನಗಳಿ‌ಗಾಗಿ ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ಕರೆದೊಯ್ಯಲಾಗುವ ಕಾರಣ ಚಿಕಿತ್ಸೆಗೆ ಬರುವವರು ಒಂದು ಲೋಟ, ತಪಟ್ಟೆ, ಬಟ್ಟೆ, ಮತ್ತು ಸಹಾಯಕರೊಬ್ಬರೊಂದಿಗೆ ಶಿಬಿರಕ್ಕೆ ಬರುವುದು.

ಪೊರೆ ಚಿಕಿತ್ಸೆ, ಪ್ರಯಾಣ, ಜೌಷಧ, ಊಟ-ವಸತಿ ಸಂಪೂರ್ಣ ಉಚಿತ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
*ಸಿ.ಕೆ. ಗೌಡ ವಿಟ್ಲ: 9448625985
*ಶಾಂತರಾಜ್, ನಿವೃತ್ತ ನೇತ್ರಾಧಿಕಾರಿ: 9448502292
*ಈಶ್ವರಪ್ಪ ಗೌಡ, ಅಳಿಕೆ.: 8217401721
*ವಿಶ್ವನಾಥ ಗೌಡ ಬಿ: 9480293763
*ಗೋಪಾಲಕೃಷ್ಣ ಕೊಡಿಪ್ಪಾಡಿಗುತ್ತು:9449947751

- Advertisement -

Related news

error: Content is protected !!