Friday, July 24, 2026
spot_imgspot_img
spot_imgspot_img

ಸುಳ್ಯ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಪ್ರೊ.ಡಾ.ಉಜ್ವಲ್ ಯು.ಜೆ. ಅಧಿಕಾರ ಸ್ವೀಕಾರ

- Advertisement -
- Advertisement -

ಕರ್ನಾಟಕ ರಾಜ್ಯ ಸರಕಾರದ ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ಯುನಿವರ್ಸಿಟಿಯ ರಿಜಿಸ್ಟ್ರಾರ್ (ಇವಾಲ್ಯುವೇಶನ್) ಆಗಿ ಸುಳ್ಯದ ಎ.ಒ.ಎಲ್.ಇ. ಬಿ ತಂಡದ ಸಿಇಒ ಆಗಿದ್ದ ಪ್ರೊ.ಡಾ.ಉಜ್ವಲ್ ಯು.ಜೆ. ಆಯ್ಕೆಯಾಗಿದ್ದಾರೆ.ವಿಶ್ವೇಶ್ವರಯ್ಯ ಟೆಕ್ನಲಾಜಿಕಲ್ ಯುನಿವರ್ಸಿಟಿಯ ಅಧೀನದಲ್ಲಿ ರಾಜ್ಯದ ಒಟ್ಟು 240 ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಇದರ 21 ನೆಯ ರಿಜಿಸ್ಟ್ರಾರ್ (ಇವಾಲ್ಯುವೇಶನ್) ಆಗಿ ಪ್ರೊ.ಉಜ್ವಲ್ ರವರು ಇಂದು ಅಧಿಕಾರ ಸ್ವೀಕರಿಸಿದರು.

ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 20 ವರ್ಷಗಳ ಕಾಲ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಬಳಿಕ ಸಂಸ್ಥೆಯ ಸಂಕಷ್ಟದ ಸಮಯದಲ್ಲಿ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್ ಬಿ ತಂಡದ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಆಗಿ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿ ಸಂಸ್ಥೆಯ ಉನ್ನತಿಗೆ ಶ್ರಮಿಸಿದ್ದ ಡಾ.ಉಜ್ವಲ್ ಯು.ಜೆ.ಯವರು ಇತ್ತೀಚೆಗಷ್ಟೇ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದರು. ಬಳಿಕ ಮೈಸೂರಿನ ಮೈಸೂರು ರಾಯಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಆಗಿ ಸುಮಾರು ಒಂದು ತಿಂಗಳು ಕಾರ್ಯನಿರ್ವಹಿಸಿದ್ದ ಅವರು ಇದೀಗ ವಿ.ಟಿ.ಯು. ರಿಜಿಸ್ಟ್ರಾರ್ ಆಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಚೆಂಬು ಗ್ರಾಮದ ಊರುಬೈಲು ಮನೆಯವರಾಗಿದ್ದು, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿ. ಯು.ಪಿ. ಜಯಪ್ರಕಾಶ್‌ ಮತ್ತು ಶ್ರೀಮತಿ ಲೀಲಾವತಿ ದಂಪತಿಯ ಪುತ್ರ.

- Advertisement -

Related news

error: Content is protected !!