Thursday, July 23, 2026
spot_imgspot_img
spot_imgspot_img

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ.) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆ

- Advertisement -
- Advertisement -

ನೂತನ ಅಧ್ಯಕ್ಷರಾಗಿ ವನಿತ್ ಕುಮಾರ್ ಡೆಪ್ಪಿನಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ.) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆಯು ಇಂದು ಚಂದಳಿಕೆ ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ವಿಟ್ಲ ಉದ್ಯಮಿಗಳಾದ ತುಳಸಿದಾಸ್ ಶೆನೈ ಮತ್ತು ರಘುಪತಿ ಪೈ ಭಾಗವಹಿಸಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ವನಿತ್ ಕುಮಾರ್ ಡೆಪ್ಪಿನಿ , ಗೌರವಾಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ವನಿತ್ ಸಾಲಿಯಾನ್ ಅಬೀರಿ, ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ಅಶ್ವಥ್ ಪೂಜಾರಿ ಪರನೀರು ಮತ್ತು ಸನತ್ ಸಾಲಿಯಾನ್ ಚಂದಳಿಕೆ , ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ , ಸಂಘಟನಾ ಕಾರ್ಯದರ್ಶಿಯಾಗಿ ಧನುಷ್ ಅಬೀರಿ, ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಆಚಾರ್ಯ ವಿಟ್ಲ ಮತ್ತು ಭರತ್ ಡೆಪ್ಪಿನಿ, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜೊತೆ ಕೋಶಾಧಿಕಾರಿಯಾಗಿ ಪ್ರವೀಣ್ ಗೌಡ ಕಟ್ಟತ್ತಿಲ ಮತ್ತು ಧನುಷ್ ಕೊಪ್ಪಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಅಬೀರಿ, ಪ್ರಧಾನ ಸಂಚಾಲಕರಾಗಿ ಯೋಗೀಶ್ ಕೇಪುಳಗುಡ್ಡೆ ಮತ್ತು ಸುಶಾಂತ್ ಸಾಲಿಯಾನ್ ಚಂದಳಿಕೆ, ದತ್ತಿನಿಧಿ ಪ್ರಮುಖರಾಗಿ ಶಶಿಧರ ಕೇಪುಳಗುಡ್ಡೆ ಆಯ್ಕೆಯಾರು

ಕಾರ್ಯಾಲಯ ಕಾರ್ಯದರ್ಶಿಯಾಗಿ ಮನೀಶ್ ಅಬೀರಿ, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ್ ಪಡೀಲ್, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪುನೀತ್ ಜೋಗಿ ಮತ್ತು ವೈಭವ್ ಶೆಟ್ಟಿ ಅಬೀರಿ , ಕಾನೂನು ಸಲಹೆಗಾರರಾಗಿ ಗೋವಿಂದ ರಾಜ್ ಪೆರುವಾಜೆ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ಗಂಗಾಧರ ಪೂಜಾರಿ ಪರನೀರು, ಗಣೇಶ್ ಪೂಜಾರಿ ಪಟ್ಲ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಚಂದ್ರಹಾಸ ಅಬೀರಿ, ಲೋಕನಾಥ ಕುರುಂಬಳ, ಸದಾನಂದ ಗೌಡ ಡೆಪ್ಪಿನಿ, ಚಿದಾನಂದ ಶೆಟ್ಟಿ ಉಜಿರೆಮಾರು ಆಯ್ಕೆಯಾದರು.

ಈ ವರ್ಷದಲ್ಲಿ ಒಟ್ಟು 1,67,000 ರೂಗಳು ಮತ್ತು 522 ಕೆ. ಜಿ ಅಕ್ಕಿ ಮತ್ತು ಕಳೆದ 7 ವರ್ಷದಲ್ಲಿ 9,26,530 ರೂಗಳನ್ನು ಮತ್ತು 2228 ಕೆ. ಜಿ ಅಕ್ಕಿಯನ್ನು ದತ್ತಿನಿಧಿ ಯೋಜನೆಯಡಿಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಅಲ್ಲದೆ ತುರ್ತು ಸಂದರ್ಭದಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಲಾಗಿದೆ ಎಂದು ತಿಳಿಸಲಾಯಿತು. 2024-25 ನೇ ವಾರ್ಷಿಕ ಅವಧಿಯಲ್ಲಿ 7,08,148 ರೂಗಳ ವ್ಯವಹಾರವನ್ನು ನಡೆಸಲಾಗಿದೆ ಎಂದು ತಿಳಿಸಲಾಯಿತು.

ಧನುಷ್ ಅಬೀರಿ ಸ್ವಾಗತಿಸಿ, ದಿವಾಕರ ಶೆಟ್ಟಿ ಅಬೀರಿ ವಂದಿಸಿ, ಸುಶಾಂತ್ ಸಾಲಿಯಾನ್ ಚಂದಳಿಕೆ ನಿರೂಪಿಸಿದರು, ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾವನೆಗೈದು, ಗಣೇಶ್ ಅಬೀರಿ ಸಹಕರಿಸಿದರು.

- Advertisement -

Related news

error: Content is protected !!