Monday, July 20, 2026
spot_imgspot_img
spot_imgspot_img

ವೈಭವಯುತವಾಗಿ ಸಂಪನ್ನಗೊಂಡ ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯಸ್ಪರ್ಧೆ “ಗೆಜ್ಜೆನಾದ -ಸೀಸನ್ 2”

- Advertisement -
- Advertisement -

ಗೆಜ್ಜೆನಾದ ಟ್ರೋಫಿ ಮುಡಿಗೇರಿಸಿಕೊಂಡ ಪುತ್ತೂರಿನ ಆದ್ಯಾ,ರನ್ನರ್ ಅಪ್ ಸ್ಥಾನಕ್ಕೆ ಪಡೆದ ಜೀವಿತಾ ವಿಟ್ಲ

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸಿದ ಬಹುನಿರೀಕ್ಷಿತ ಏಕವ್ಯಕ್ತಿ ನೃತ್ಯಸ್ಪರ್ಧೆ “ಗೆಜ್ಜೆನಾದ -ಸೀಸನ್ 2 ವೈಭವಯುತವಾಗಿ ನಡೆದು ಸಂಪನ್ನಗೊಂಡಿದೆ.ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ 37 ಸ್ಪರ್ಧಿಗಳ ನಡುವೆ ರೋಚಕತೆಯಿಂದ ಕೂಡಿದ “ಗೆಜ್ಜೆನಾದ-ಸೀಸನ್ -2″ಏಕವ್ಯಕ್ತಿ ನೃತ್ಯಸ್ಪರ್ಧೆ ಅನೇಕ ಗಣ್ಯ ಅತಿಥಿಗಳ ಭಾಗವಹಿಸುವಿಕೆ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಬಹಳ ಸಂಭ್ರಮದಿಂದ ಕೂಡಿತ್ತು.

ರಾಜತಾದ್ರಿ ಮುಂಡ್ರಬೈಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಕೃಷ್ಣಪ್ಪ ಪೂಜಾರಿಯವರು ಸ್ಪರ್ಧೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

“ಗೆಜ್ಜೆನಾದ – ಸೀಸನ್-2″ಏಕವ್ಯಕ್ತಿ ನೃತ್ಯ ಸ್ಪರ್ಧೆಯ ವಿಜೇತರಾಗಿ ಪುತ್ತೂರಿನ ಆದ್ಯಾ ಹೊರಹೋಮ್ಮಿದರೆ, ಜೀವಿತಾ ವಿಟ್ಲ ರನ್ನರ್ ಅಪ್ ಸ್ಥಾನ, ಋತ್ವ ಎಚ್.ಪಿ ಮಂಗಳೂರು ತೃತೀಯ ಸ್ಥಾನ,ಋದ್ಧಿ ಎಂ.ವಿ ಚತುರ್ಥ ಸ್ಥಾನ, ಪಂಚಮ ಧೃತಿ ಎಚ್ ರೈ ಪಂಚಮ ಸ್ಥಾನವನ್ನು ಪಡೆದುಕೊಂಡರು.

ಪ್ರಥಮ ಸ್ಥಾನ ಪಡೆದ ಆದ್ಯಾ ಅವರು 10,000ನಗದು ಮತ್ತು ಗೆಜ್ಜೆನಾದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಜೀವಿತಾ ವಿಟ್ಲ ಅವರು 5,000 ನಗದು ಮತ್ತು ಗೆಜ್ಜೆನಾದ ಟ್ರೋಫಿ, ತೃತೀಯ ಸ್ಥಾನ ಪಡೆದ ಋತ್ವ ಎಚ್. ಪಿ ಅವರು 3,000 ನಗದು ಮತ್ತು ಗೆಜ್ಜೆನಾದ ಟ್ರೋಫಿ,ಚತುರ್ಥ ಸ್ಥಾನ ಪಡೆದ ಋದ್ಧಿ ಎಂ.ವಿ ಹಾಗೂ ಪಂಚಮ ಸ್ಥಾನ ಪಡೆದ ಧೃತಿ ಎಚ್ ರೈ ಅವರು ಗೆಜ್ಜೆನಾದ ಟ್ರೋಫಿಯನ್ನು ಕಲಾತಪಸ್ವಿ ತಂಡದಿಂದ ಬಹುಮಾನವಾಗಿ ಪಡೆದುಕೊಂಡರು. ಉಳಿದ ಎಲ್ಲಾ ಸ್ಪರ್ಧಿಗಳಿಗೂ ಸ್ಮರಣಿಕೆ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.

ಕಲಾತಪಸ್ವಿ ತಂಡವು ಗೆಜ್ಜೆನಾದ ಸ್ಪರ್ಧೆಯ ನಿಮಿತ್ತ ಆಯೋಜಿಸಿದ್ದ “ರಾಜರಾಣಿ-2025″ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಾಗೆಯೇ ಲಕ್ಕಿಡಿಪ್ ಅದೃಷ್ಟವಂತರ ಆಯ್ಕೆಯನ್ನು ಮಾಡಲಾಯಿತು. ಕಲಾತಪಸ್ವಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

- Advertisement -

Related news

error: Content is protected !!