Wednesday, September 30, 2026
spot_imgspot_img
spot_imgspot_img

ಕಾರವಾರ: ಬೀಚ್‌ನಲ್ಲಿ ಮುಳುಗುತಿದ್ದ ವಿದೇಶಿ ಮಹಿಳೆಯ ರಕ್ಷಣೆ

- Advertisement -
- Advertisement -

ಕಾರವಾರ: ಕುಮಟಾ ತಾಲೂಕಿನ ಕುಡ್ಲೇ ಬೀಚ್‌ನಲ್ಲಿ ಮುಳುಗುತಿದ್ದ ವಿದೇಶಿ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಕಜಕಿಸ್ತಾನ ಮೂಲದ ಐದಾಲಿ (25) ರಕ್ಷಣೆಗೊಳಗಾದ ಮಹಿಳೆ. ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಐದಾಲಿ ಅಲೆಗೆ ಸಿಲುಕಿದ್ದರು. ಕೂಡಲೇ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರನ್ನು ಕಾಪಾಡಿದ್ದಾರೆ.

ರಕ್ಷಣಾ ಸಿಬ್ಬಂದಿ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ನಾಗೇಂದ್ರ ಎಂಬವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!