Wednesday, July 29, 2026
spot_imgspot_img
spot_imgspot_img

ಪುತ್ತೂರು: ಇಎನ್‌‌ಟಿ ಕ್ಲಿನಿಕ್‌‌ನ ಸಿಬ್ಬಂದಿ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

- Advertisement -
- Advertisement -

ಪೀಠೋಪಕರಣಗಳಿಗೆ ಹಾನಿ- ದೂರು ದಾಖಲು

ಪುತ್ತೂರು: ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಇಎನ್‌‌ಟಿ ಕ್ಲಿನಿಕ್‌‌ನ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಕ್ಲಿನಿಕ್‌‌ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿ ನಡೆದಿದೆ.

ಖ್ಯಾತ ವೈದ್ಯ ಡಾ.ರಾಮ್ ಮೋಹನ್ ನೇತೃತ್ವದ ಕ್ಲಿನಿಕ್ ಇದಾಗಿದ್ದು, ದಿನಂಪ್ರತಿ ನೂರಾರು ಮಂದಿ ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದು ಮುಂಜಾನೆ 6 ಗಂಟೆಯಿಂದಲೇ ಕ್ಲಿನಿಕ್‌‌ಗೆ ಬಂದು ಟೋಕನ್ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ 6.:30ರ ಹೊತ್ತಿಗೆ ಕ್ಲಿನಿಕ್ ಹೊರಭಾಗದ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ವ್ಯಕ್ತಿಯೋರ್ವ ಬಂದು ಆತನ ಪರಿಚಯಸ್ಥರನ್ನು ವೈದ್ಯರ ಬಳಿ ಬೇಗ ಕಳುಹಿಸದಿರದನ್ನು ಪ್ರಶ್ನಿಸಿದ್ದಾನೆ.

ನಂಬರ್‌ ಪ್ರಕಾರ ಕಳುಹಿಸುವುದಾಗಿ ಸಿಬ್ಬಂದಿ ಹೇಳಿದ್ದು ಇದಕ್ಕೆ ವ್ಯಕ್ತಿಯು ದಾಂಧಲೆ ಎಬ್ಬಿಸಿದಲ್ಲದೇ ಸಿಬ್ಬಂದಿ ಶ್ರೀಕಾಂತ್‌ನ ಮೇಲೆ ಹಲ್ಲೆ ನಡೆಸಿದ್ದಾನೆ. ಕ್ಲಿನಿಕ್‌‌ನ ಸ್ವತ್ತುಗಳ ಮೇಲೆ ಹಾನಿ ಮಾಡಿದ್ದಾನೆ. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಾಳು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನಾ ಸ್ಥಳಕ್ಕೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.

- Advertisement -

Related news

error: Content is protected !!