





ಎರುಂಬು ಶ್ರೀ ವಿಷ್ಣುಮೂರ್ತಿ (ಮಂಗಳ) ದೇವರ ಸನ್ನಿಧಿಯಲ್ಲಿ 25ನೇ ವರ್ಷದ ಭಜನೋತ್ಸವ ಕಾರ್ಯಕ್ರಮ 30/12/2025ನೇ ಮಂಗಳವಾರ ನಡೆಯಿತು.
ದಿನಾಂಕ: 30/12/2025ನೇ ಮಂಗಳವಾರ ಬೆಳಿಗ್ಗೆ ಗೋಪಾಲ ಬೆಳ್ಚಾಡ ಆಚಾರಪಟ್ಟವರು ಉಪ್ಪಳ ಶ್ರೀ ಭಗವತೀ ಕ್ಷೇತ್ರ ಇವರು ಸಾಮೂಹಿಕ ಫಲನಿವಾಸ ಪ್ರಾರ್ಥನೆ, ಗಣಪತಿ ಹವನ ಮತ್ತು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನೋತ್ಸವ ಕಾರ್ಯಕ್ರಮ ಪ್ರಾರಂಭವಾಯಿತು. ಬಳಿಕ ಶ್ರೀ ದೇವರ ಸನ್ನಿಧಿಯಲ್ಲಿ ಪಂಚಾಮೃತಭಿಷೇಕ ನಡೆದು ನಾಗಸನ್ನಿಧಿಯಲ್ಲಿ ನಾಗತಂಬಿಲ, ಆಶ್ಲೇಷಬಲಿ ಪೂಜೆ ನಡೆಯಿತು. ಬಳಿಕ ಅಶ್ವತಕಟ್ಟೆಯಲ್ಲಿ ಅಶ್ವಥನಾರಾಯಣ ಪೂಜೆ ನಡೆಯಿತು. ಮಥ್ಯಾಹ್ನ ಮಹಾಮಂಗಳಾರತಿ, ಬಲಿವಾಡು ಕೂಟ, ಅನ್ನಪ್ರಸಾದ ನಡೆಯಲಿದೆ.
ಸಂಜೆ 6:00ಕ್ಕೆ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಪ್ರಸಾ ವಿತರಣೆ ಹಾಗೂ “ಧಾರ್ಮಿಕ ಸಭಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎರುಂಬು ಶ್ರೀ ವಿಷ್ಣುಮೂರ್ತಿ (ಮಂಗಲ) ದೇವಸ್ಥಾನ ಅಧ್ಯಕ್ಷ ವಸಂತ ಕುಲಾಲ್ ಎರುಂಬು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಎರುಂಬು ರಾಮಚಂದ್ರ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ವಾಸ್ ಜೆ. ಶೆಟ್ಟಿ ಬೆಂಗಳೂರು, ಪ್ರಗತಿಪರ ಕೃಷಿಕ ವೆಂಕಟಕೃಷ್ಣ ಶರ್ಮ ಮುಳಿಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಳಿಯ ಒಕ್ಕೂಟ ಸೇವಾ ಪ್ರತಿನಿಧಿ ಶ್ರೀಮತಿ ವಿನಯ ರೈ, ಶ್ರೀ ಸತ್ಯಸಾಯಿ ಫಾರ್‍ಮ್ಸ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಮೇಲ್ವಿಚಾರಕ ಎ.ಪಿ. ಗೋಪಾಲ ಮಣಿಯಾಣಿ, ಅಡ್ಯನಡ್ಕ ಜನತಾ ಪ್ರೌಢ ಶಾಲೆ ನಿವೃತ್ತ ಅಧ್ಯಾಪಕ ರಾಜಗೋಪಾಲ ಜೋಷಿ ಮೈರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಶ್ರೀ ಭ್ರಾಮರಿ ಕಿಚನ್‌ವೇರ್‍ಸ್ ಪ್ರಮೋದ್ ಕುಮಾರ್ ರೈ, ಚವರ್‌ಕಾಡು ಪಾಕಶಾಸ್ತ್ರಜ್ಞರ ಸತ್ಯನಾರಾಯಣ ಭಟ್, ವಿಠಲ ಬಲ್ಲಾಳ್ ಎರುಂಬು ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ: 31/12/2025ನೇ ಬುಧವಾರ ಬೆಳಿಗ್ಗೆ6.00 ಗಣಪತಿ ಹವನದೊಂದಿಗೆ ಭಜನೋತ್ಸವ ಆರಂಭವಾಗಲಿದೆ. ಕುಂಟುಕುಡೇಲು ಬ್ರಹ್ಮಶ್ರೀ ಗುರುರಾಜ ತಂತ್ರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 7.00ಕ್ಕೆ ಶ್ರೀದೇವರಿಗೆ ಸೀಯಾಳಾಭಿಷೇಕ, ಹರಿದ್ರಾ-ಕುಂಕುಮ-ಗಂಧ-ಪುಷ್ಪ ಅಭಿಷೇಕ ನಂತರ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಡೆಯಲಿದೆ. ಮಧ್ಯಾಹ್ನ 1.00ಕ್ಕೆ ಮಹಾಮಂಗಳಾರತಿ, ಬಲಿವಾಡು ಕೂಟ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.00ಕ್ಕೆ ಭಜನಾ ಮಂಗಳೋತ್ಸವ, ಶ್ರೀದೇವರಿಗೆ ಮಹಾಪೂಜೆ, ನಂತರ ದೊಡ್ಡ ರಂಗಪೂಜೆ ಸಂಕಲ್ಪ, ಕುಣಿತ ಭಜನೆ ನಡೆದು ರಾತ್ರಿ 7.00ಕ್ಕೆ ದೊಡ್ಡ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.








