ಬಡ ವ್ಯಾಪಾರಿಗಳಿಂದ ಟೆಂಡರ್ ದಾರ ಮಹೇಶ್ ದಾಸ್ ವಿರುದ್ದ ಎರಡು ಪ್ರತ್ಯೇಕ ದೂರು



ವಿಟ್ಲ: ಶ್ರೀ ಪಂಚಲಿಂಗೆಶ್ವರ ದೇವರ ಜಾತ್ರೆಯಲ್ಲಿ ಟೆಂಡರ್ ದಾರ ಮಹೇಶ್ ದಾಸ್ ಎಂಬುವವನು ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮತ್ತು ಮೋಸ ಮಾಡಿರುವುದಾಗಿ ಬೆಳ್ತಂಗಡಿ ತಾಲೂಕಿನ , ಕೆಮ್ರಾಜೆ ನಿವಾಸಿ ಸತೀಶ್ ಯಮುನೂರಪ್ಪ ಹಲೀಗೇರಿ ಮತ್ತು ಬಂಟ್ವಾಳ ತಾಲೂಕಿನ ಕೊಪ್ಪಳ ನಿವಾಸಿ ಸುಭಾಶ್ ಆರ್ ಇವರು ವಿಟ್ಲ ಪಟ್ಟಣ ಪಂಚಾಯತ್ ಗೆ ದೂರು ನೀಡಿದ್ದಾರೆ.
ಸತೀಶ್ ಯಮುನೂರಪ್ಪ ಹಲೀಗೇರಿ ಇವರ ದೂರಿನ ಪ್ರಕಾರ, ಟೆಂಡರ್ ನಲ್ಲಿ ನಿಗದಿಯಾದ ಪ್ರಕಾರ 10,000 ರೂ . ಬಾಡಿಗೆ, 1800 gst ಹಾಗೂ ಟೆಂಡರ್ ಮೊತ್ತ ನಿಗದಿ ಪಡಿಸಿದ 1900 ರೂಪಾಯಿಗಳನ್ನು 10feet ಗೆ ನಿಗದಿಪಡಿಸಲಾಗಿತ್ತು ಅಂದರೆ ಒಟ್ಟು ಮೊತ್ತ 10feet ಗೆ 13, 700ರೂಪಾಯಿಗಳು. ಆದರೆ ಮಹೇಶ್ ದಾಸ್ ಬಡ ವ್ಯಾಪಾರಸ್ಥರಿಂದ ಬೃಹತ್ ಮಟ್ಟದಲ್ಲಿ ಹೆಚ್ಚುವರಿಯಾಗಿ ಹಣ ಪಡೆದಿರುತ್ತಾನೆ 20feetಗೆ 27,400 ರೂಪಾಯಿಯ ಬದಲು 35000 ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆ 10feet ಅಂಗಡಿಗೆ ಮತ್ತು 15feet ಅಂಗಡಿಗೆ 10feetನ ರಶೀದಿ ನೀಡಿ, ಧಮ್ಕಿ ಹಾಕಿ ಹೆಚ್ಚುವರಿ ಮೊತ್ತ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನಿಂದ 10feetನ ಅಂಗಡಿಗೆ ಬರೋಬ್ಬರಿ 15,500 ದಮ್ಕಿ ಹಾಕಿ ಪಡೆದಿದ್ದಾನೆ , ಅಂದರೆ ಬರೋಬ್ಬರಿ 1800 ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಿತ್ತುಕೊಂಡಿದ್ದಾನೆ. ಪಂಚಾಯತ್ ಸಿಬ್ಬಂದಿಗಳೇ ಅಳತೆ ಮಾಡಿರುವ ಪ್ರಕಾರ ನನ್ನ ಅಂಗಡಿ ಸರಿಯಾಗಿ 10feet ಇರುತ್ತದೆ ಹಾಗಾಗಿ ಪಂಚಾಯತ್ ನಿಗದಿಪಡಿಸಿದ ಪ್ರಕಾರ ನನಗೆ 13, 700 ರೂಪಾಯಿಗಳು ಮಾತ್ರ ಆಗಬೇಕಿತ್ತು ಅದರೆ ಹೆಚ್ಚುವರಿಯಾಗಿ 1800 ರೂಪಾಯಿಗಳನ್ನು ಕಿತ್ತುಕೊಂಡಿದ್ದಾನೆ .ಟೆಂಡರ್ ನಿಯಮದ ಪ್ರಕಾರ ಹೆಚ್ಚುವರಿಯಾಗಿ ಪಡೆಯುವುದು ಅಪರಾಧ ಎಂದು ಪಂಚಾಯತ್ ಅಧಿಕಾರಿಗಳು ಹೇಳಿದ್ದರು, ಈತ ರೌಡಿಸಂ ಮಾಡಿ ಬಡ ವ್ಯಾಪಾರಸ್ಥರಿಂದ ಹಣ ಕಿತ್ತುಕೊಂಡ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಪ್ಪಳ ನಿವಾಸಿ ಸುಭಾಶ್ ಆರ್ ಇವರ ದೂರಿನ ಪ್ರಕಾರ, ಟೆಂಡರ್ ನಲ್ಲಿ ನಿಗದಿಯಾದ ಪ್ರಕಾರ, 10 ಅಡಿಗೆ 10000 ರೂ. ಬಾಡಿಗೆ 1800 ರೂ. ಜಿ.ಎಸ್.ಟಿ ಹಾಗೂ 1900 ಸರ್ವಿಸ್ ಚಾರ್ಜ್ ಅಂದರೆ ಒಟ್ಟು ಮೊತ್ತ 13700 ರೂಪಾಯಿಗಳು ಎಂದು ನಿಗದಿಪಡಿಸಲಾಗಿತ್ತು. ಆ ಪ್ರಕಾರವಾಗಿ ಸುಭಾಶ್ ರವರು ವಿಟ್ಲ ಪಟ್ಟಣ ಪಂಚಾಯತ್ ಗೆ ಸೇರಿದ ಅಂದರೆ ಸರಿಯಾಗಿ ದೇವಸ್ಥಾನದ ಆನೆಬಾಗಿಲು ಎದುರುಗಡೆ ಇರುವ ಆಚಾರ್ಯ ಅವರ ಮನೆಯ ಎಡಭಾಗಕ್ಕೆ 20 ಅಡಿಯ ಟೆಂಡರ್ ಹಾಕಿರುವುದಾಗಿ ತಿಳಿಸಿದ್ದಾರೆ.
ಟೆಂಡರ್ ವಿಜೇತ ಮಹೇಶ್ ದಾಸ್ ಎಂಬುವವನು 20 ಅಡಿಗೆ 27400 ರೂಪಾಯಿಗಳನ್ನು ಪಡೆದಿರುತ್ತಾನೆ, ಆದರೆ ವಿಟ್ಲ ಪಟ್ಟಣ ಪಂಚಾಯತ್ ನೀಡಿರುವ ರಶೀದಿಯನ್ನು ಅವರಿಗೆ ನೀಡಿರುವುದಿಲ್ಲ, ಈ ಮೊತ್ತವನ್ನು ರಶೀದಿ ನೀಡದೆ ಹಣ ಪಡೆದುಕೋಡು ತನ್ನ ಜೇಬಿಗೆ ಇಳಿಸಿಕೊಂಡಿರುವುದಾಗಿ ನನ್ನ ಗಮನಕ್ಕೆ ಬಂದಿರುತ್ತದೆ., ಇದೇ ರೀತಿ ಪಂಚಾಯತ್ ಗೆ ನಾನಾ ರೀತಿಯಲ್ಲಿ ಮೋಸ ಮಾಡಿರುತ್ತಾನೆ ಎಂದು ದೂರು ನೀಡಿದ್ದಾರೆ.








