- Advertisement -
- Advertisement -



ಮಂಡ್ಯ: ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಭಾನುವಾರ(ಫೆ. 8) ನಡೆದಿದೆ.
ಮಹೇಶ್ ಎಂಬವರ ಪತ್ನಿ ಶಕುಂತಲಾ ದೇವಿ(46) ಮತ್ತು ಅವರ ಪುತ್ರಿ ಪ್ರಿಯಾಂಕಾ(19) ಮೃತಪಟ್ಟವರು.
ಮಹೇಶ್ ಅವರು ನೀಡಿದ ದೂರಿನಂತೆ, ಪಕ್ಕದ ಮನೆಯ ನಿವಾಸಿ ಮುತ್ತುರಾಜು (35) ಎಂಬಾತ ಪ್ರಿಯಾಂಕಾಳಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಸತತವಾಗಿ ಕಿರುಕುಳ ಮತ್ತು ಕೊಲೆ ಬೆದರಿಕೆ ನೀಡುತ್ತಿದ್ದ ಎನ್ನಲಾಗಿದೆ.
ಮುತ್ತುರಾಜ್ ಈಗಾಗಲೇ ವಿವಾಹಿತನಾಗಿದ್ದು ಮೂವರು ಮಕ್ಕಳ ತಂದೆಯಾಗಿದ್ದರೂ, ಮದುವೆ ನಿಶ್ಚಯವಾದ ನಂತರವೂ ಕಿರುಕುಳವನ್ನು ತೀವ್ರಗೊಳಿಸಿದ್ದುದರಿಂದ ಬೇಸತ್ತು ತಾಯಿ-ಮಗಳು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- Advertisement -








