Wednesday, July 22, 2026
spot_imgspot_img
spot_imgspot_img

ಬೆಂಗಳೂರು: ಮೂವರು ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ – 64ರ ವೃದ್ಧ ಅರೆಸ್ಟ್!

- Advertisement -
- Advertisement -

ಬೆಂಗಳೂರು: ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ ಆರೋಪದಡಿ 64 ವರ್ಷದ ವೃದ್ಧನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೋಷಕರು ಬೆಳಗ್ಗೆ 8:30ಕ್ಕೆ ಮಕ್ಕಳನ್ನು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 10 ಗಂಟೆಗೆ ಶಾಲೆ ಆರಂಭವಾದರೂ ಬಾಲಕಿಯರು ಎಂಟೂವರೆಗೆ ಬರುತ್ತಿದ್ದನ್ನು ಮನಗಂಡ ವೃದ್ಧ ಮಕ್ಕಳಿಗೆ ಚಾಕೋಲೆಟ್ ಆಸೆ ತೋರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ.

ಶುಕ್ರವಾರ ಎರಡನೇ ತರಗತಿಯ ಬಾಲಕಿಗೆ ವೃದ್ಧ ಲೈಂಗಿಕ ಕಿರುಕುಳ ಕೊಟ್ಟಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದರು. ವಿಚಾರಣೆ ಮಾಡಿದ ವೇಳೆ ಮೂರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!