


ಲಕ್ನೋ: ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದು, ತುಂಡು ಮಾಡಿ, ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದ ಘಟನೆಯೊಂದು ನಡೆದಿದೆ.
ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ ಮನ್ವೇಂದ್ರ ಸಿಂಗ್(49) ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಸಂಬಂಧ ಅವರ ಮನೆಗೆ ಭೇಟಿ ನೀಡಿದ್ದ ಪೊಲೀಸರಿಗೆ ಬ್ಯಾರೆಲ್‌ನಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿದ್ದು, ಪುತ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತೀವ್ರ ವಿಚಾರಣೆಯ ನಂತರ ಅಕ್ಷತ್ ಕೊಲೆ ಮಾಡಿ, ಶವವನ್ನು ವಿಲೇವಾರಿ ಮಾಡಿರುವುದಾಗಿ ಪೊಲೀಸರು ಮುಂದೆ ತಿಳಿಸಿದ್ದಾನೆ.
ಮನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ಮಗ ಅದಕ್ಕೆ ವಿರೋಧಿಸಿದ್ದ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಯುವಕ ಒಮ್ಮೆ ಮನೆಯಿಂದ ಓಡಿಹೋಗಿದ್ದ.
ಮತ್ತೆ ಮನೆಗೆ ವಾಪಸ್ ಬಂದಾಗ, ತಂದೆ ಮತ್ತು ಮಗನ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ, ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಕೊಂಡೊಯ್ದು, ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾರೆ.
ಸಹೋದರಿ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದು, ವಿಚಾರವನ್ನು ಯಾರಿಗೂ ಹೇಳದಂತೆ ಸಹೋದರಿಗೆ ಬೆದರಿಕೆ ಹಾಕಿದ್ದನು. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿ, ಮುಂಡ ಸೇರಿದಂತೆ ಕೆಲವು ಭಾಗಗಳನ್ನು ಮೊನೆಯೊಳಗೆ ಇಟ್ಟಿದ್ದ ನೀಲಿ ಡ್ರಮ್‌ನಲ್ಲಿ ಹಾಕಿದ್ದನೆಂಬ ವಿಚಾರವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.







