Sunday, July 26, 2026
spot_imgspot_img
spot_imgspot_img

ಕನ್ಯಾನ: ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ(ರಿ.) ವಿಟ್ಲ ವಲಯ-ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ

- Advertisement -
- Advertisement -

ಕನ್ಯಾನ: ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ.) ವಿಟ್ಲ ವಲಯದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮವು ಮಾ. 3ರಂದು ಮಂಗಳವಾರ ಬೆಳಿಗ್ಗೆ 9.30ಕ್ಕೆ ಭಾರತ ಸೇವಾಶ್ರಮ ಕನ್ಯಾನ ದೇಲಂತಬೆಟ್ಟು ಇಲ್ಲಿ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಆಶ್ರಮದಲ್ಲಿರುವ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಧೀರ್‍ ಕೊಟ್ಯಾನ್ ಅಧ್ಯಕ್ಷರು,ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ , ವಿಟ್ಲ(ರಿ)ವಲಯ ಇವರು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಈಶ್ವರ ಭಟ್ ಕಾರ್ಯದರ್ಶಿಗಳು ಭಾರತ ಸೇವಾಶ್ರಮ ಕನ್ಯಾನ, ಎ.ಪಿ. ರಘುರಾಮ ಶೆಟ್ಟಿ ಮಾಜಿ ಪಂಚಾಯತ್ ಅಧ್ಯಕ್ಷರು, ರಶೀದ್ ವಿಟ್ಲ ಪತ್ರಕರ್ತರು ವಿಟ್ಲ, ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷರು ಬ್ರಹ್ಮಶ್ರೀ ವಿವಿದ್ದೋದ್ದೇಶ ಸಹಕಾರಿ ಸಂಘ (ರಿ) ವಿಟ್ಲ , ರಾಮದಾಸ್ ಶೆಟ್ಟಿ ಆಡಳಿತ ನಿದೇರ್ಶಕರು vtv ವಿಟ್ಲ, ಶ್ರೀನಿವಾಸ ಶೆಟ್ಟಿ ಕೊಲ್ಯ ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!