Friday, September 11, 2026
spot_imgspot_img
spot_imgspot_img

ಪುತ್ತೂರು: ನರಿಮೊಗರಿನಲ್ಲಿ ಕೋಳಿ ಕಳ್ಳರಿದ್ದಾರೆ ಎಚ್ಚರಿಕೆ

- Advertisement -
- Advertisement -

ಪುತ್ತೂರು: ನರಿಮೊಗರು ಸೇರಾಜೆ ಎಂಬಲ್ಲಿ ಕೋಳಿ ಫಾರ್ಮ್‌ಗೆ ನುಗ್ಗಿದ ಕಳ್ಳರು ಅಲ್ಲಿಂದ ಕೋಳಿಗಳನ್ನು ಕಳ್ಳತನ ಮಾಡಿದ್ದಾರೆ. ಮಾಮರ ಪೌಲ್ಟ್ರೀ ಫಾರ್ಮ್‌ನಿಂದ ಕೋಳಿಗಳ ಕಳವು ಅಗಿರುವ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಫಾರ್ಮ್‌ಗೆ ಅಳವಡಿಸಿದ್ದ ಪ್ಲಾಸ್ಟೀಕ್ ಕೋಟೆಡ್ ನೆಟ್‌ಗೆ ಹಾನಿಯಾಗಿದ್ದರಿಂದ ಇದೊಂದು ಕಳ್ಳರ ಕೃತ್ಯ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ನರಿಮೊಗರು ಸೇರಾಣೆ ಮಾಮರ ಪೌಲ್ಟ್ರೀ ಫಾರ್ಮ್‌‌ನ ಮಾಲಕ ರವಿರಾಜ್ ಅವರು ಸಂಜೆ ಫಾರ್ಮುನಲ್ಲಿ ಕಾರ್ಯ ನಿರ್ವಹಿಸಿ ಮಂಗಳೂರಿನ ಮನೆಗೆ ತೆರಳಿದ್ದರು.

ಬೆಳಿಗ್ಗೆ ಫಾರ್ಮ್‌ಗೆ ಬಂದು ನೋಡಿದಾಗ ಫಾರ್ಮುಗೆ ಅಳವಡಿಸಿದ್ದ ಪ್ಲಾಸ್ಟಿಕ್ ಕೋಟೆಡ್ ನೆಟ್ ಕತ್ತರಿಸಿದ ರೀತಿಯಲ್ಲಿರುವುದು ಬೆಳಕಿಗೆ ಬಂದಿದ್ದು ಫಾರ್ಮು ಒಳಗಿದ್ದ 20 ಕೋಳಿಗಳು ಕಾಣೆಯಾಗಿದೆ. ಕಾಣೆಯಾದ ಕೋಳಿಗಳ ಒಟ್ಟು ಮೌಲ್ಯ ರೂ. 5ಸಾವಿರ ಆಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಇದೊಂದು ಕಳ್ಳರ ಕೃತ್ಯ ಎಂದು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -

Related news

error: Content is protected !!