



ಬೈಪದವು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ) ವತಿಯಿಂದ, ಜನಸೇವಾ ಚಿಕಿತ್ಸಾಕೇಂದ್ರದ ಸಹಯೋಗದಲ್ಲಿ “ಸೇವೆಯೇ ಪರಮ ಧರ್ಮ” ಎಂಬ ಧ್ಯೇಯದೊಂದಿಗೆ ಮಿತ್ತೂರು ಸ್ವಾಸ್ಥ್ಯನಿಧಿಯಡಿ ಜನಸೇವಾ ಚಿಕಿತ್ಸಾ ಸೇವೆ ಆರಂಭಗೊಳ್ಳಲಿದೆ.
ಈ ಚಿಕಿತ್ಸಾ ಕೇಂದ್ರವು ಪ್ರತೀ ಗುರುವಾರ ಅಪರಾಹ್ನ 2.00ರಿಂದ 3.00ರವರೆಗೆ (ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಕಾರ್ಯನಿರ್ವಹಿಸಲಿದೆ. ಪ್ರಖ್ಯಾತ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ.
ಮಾರ್ಚ್ 27 ಶುಕ್ರವಾರ ಸಂಜೆ 4.00ರಿಂದ 5.00ರವರೆಗೆ ಬೈಪದವು ‘ವಿದ್ಯಾಕುಟೀರ’ದಲ್ಲಿ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕೋಡಿ ಪದ್ಮನಾಭ (ಮಾಜಿ ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು) ವಹಿಸಲಿದ್ದು, ಡಾ. ಶ್ರೀದೇವಿ ವಿಕ್ರಮ್ ಸೇಡಿಯಾಪು (ಎಂಬಿಬಿಎಸ್, ಡಿಎನ್ಬಿ, ಹಿರಿಯ ಮಕ್ಕಳ ತಜ್ಞರು) ಉದ್ಘಾಟನೆ ನೆರವೇರಿಸಲಿದ್ದಾರೆ. ಚಿಕಿತ್ಸಾ ವೈದ್ಯರು: ಡಾ. ಜಯಪ್ರಕಾಶ ಕೊಂಕೋಡಿ (ಎಂಬಿಬಿಎಸ್, ಎಂಡಿ. ಡಿಎಂ., ಸಾಮಾನ್ಯ ರೋಗ ಮತ್ತು ಚಿಕಿತ್ಸಾ ತಜ್ಞರು), ಶುಭಾಶಂಸನೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಶ್ಚಂದ್ರ ಪಿ.ಜೆ. (ಕಬಕ) ನೀಡಲಿದ್ದು, ಮೂಡಬಿದಿರೆಯ ಹಿರಿಯ ಔಷಧಿ ವ್ಯಾಪಾರಸ್ಥ ಕೇಶವ ಭಟ್ ಹಾಗೂ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಉಪಸ್ಥಿತರಿರುತ್ತಾರೆ.
ಚಿಕಿತ್ಸಾ ಸೇವೆಯನ್ನು ಡಾ. ಜಯಪ್ರಕಾಶ ಕೊಂಕೋಡಿ (ಎಂಬಿಬಿಎಸ್, ಎಂಡಿ, ಡಿಎಂ – ಸಾಮಾನ್ಯ ರೋಗ ಮತ್ತು ಚಿಕಿತ್ಸಾ ತಜ್ಞರು) ನೀಡಲಿದ್ದಾರೆ.
ಸ್ಥಳ : ವಿದ್ಯಾಕುಟೀರ ಬೈಪದವು ಸಮಯ: ಪ್ರತೀ ಗುರುವಾರ ಅಪರಾಹ್ನ 2.00ರಿಂದ 3.00ರವರೆಗೆ (ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಕಾರ್ಯನಿರ್ವಹಿಸಲಿದೆ.
ಸಂದರ್ಶನ ಶುಲ್ಕ ರೂ. 10/- ನಿಗದಿಪಡಿಸಲಾಗಿದೆ. ಚಿಕಿತ್ಸೆ ಪಡೆಯಲು ಬಯಸುವವರು ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ನೀಡಲಾಗುವ ಸೇವೆಗಳು
1. ಸಕ್ಕರೆ ಕಾಯಿಲೆ, ರಕ್ತದೊತ್ತಡ ಇತ್ಯಾದಿ ಸಾಮಾನ್ಯ ಕಾಯಿಲೆಗಳ ಸಮಾಲೋಚನೆ
2. ಕ್ಲಿಷ್ಟಕರವಾದ ಬಹು ಅಂಗಾಂಶಗಳ ಸಂಕೀರ್ಣ ಕಾಯಿಲೆಗಳ ಸಮಾಲೋಚನೆ
3. ಜನೌಷಧಿಯನ್ನು ಒಳಗೊಂಡ ಸಲಹೆಗಳು
ಸಂಪರ್ಕ ಸಂಖ್ಯೆ: 9867768221, 9449818221
ಸಂಪ್ರತಿಷ್ಠಾನ ಸಂಪರ್ಕ: ಶ್ರೀ ರಾಧಾಕೃಷ್ಣ ಭಟ್ – 8105573487
ಶ್ರೀ ರಾಮನವಮೀ ಪ್ರಯುಕ್ತ ಪರಾಭವ ಸಂ|ದ ವಸಂತಋತು, ಚೈತ್ರಮಾಸ ನವಮೀ ಶುಕ್ರವಾರದಂದು ಸಾಯಂಕಾಲ 5.30 ರಿಂದ ವಿದ್ಯಾಕುಟೀರದಲ್ಲಿ ಶ್ರೀರಾಮಪೂಜೆ ಮತ್ತು ಭಜನಾಸೇವಾ ಕಾರ್ಯಕ್ರಮಗಳು ನಡೆಯಲಿದೆ.








