Sunday, July 19, 2026
spot_imgspot_img
spot_imgspot_img

ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್–ಒಮಾನ್ ಒಪ್ಪಿಗೆ

- Advertisement -
- Advertisement -

ಟೆಹ್ರಾನ್/ಮಸ್ಕತ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಕೈಗೊಳ್ಳಲಾದ ಎರಡು ವಾರಗಳ ಕದನ ವಿರಾಮ ಒಪ್ಪಂದದ ಭಾಗವಾಗಿ, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ಮತ್ತು ಒಮಾನ್ ದೇಶಗಳಿಗೆ ಅವಕಾಶ ನೀಡಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ.ಈ ಕುರಿತು AP ಉಲ್ಲೇಖಿಸಿದ ಪ್ರಕಾರ, ಶುಲ್ಕದಿಂದ ಸಂಗ್ರಹವಾಗುವ ಹಣವನ್ನು ಇರಾನ್ ಯುದ್ಧಾನಂತರದ ಪುನರ್‌ ನಿರ್ಮಾಣ ಕಾರ್ಯಗಳಿಗೆ ಬಳಸಿಕೊಳ್ಳಲಿದೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಒಮಾನ್ ತನ್ನ ಪಾಲಿನ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.ಮಾತುಕತೆಗಳಲ್ಲಿ ನೇರವಾಗಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು, ಆಂತರಿಕ ಚರ್ಚೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನ ಮೇಲೆ ಮಾಹಿತಿ ನೀಡಿದ್ದಾರೆ ಎಂದು ಎಪಿ ತಿಳಿಸಿದೆ.ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ಮತ್ತು ಒಮನ್ ದೇಶಗಳು ಪ್ರಾದೇಶಿಕ ಹಕ್ಕುಗಳನ್ನು ಹಂಚಿಕೊಂಡಿವೆ.

- Advertisement -

Related news

error: Content is protected !!