Thursday, July 23, 2026
spot_imgspot_img
spot_imgspot_img

ಪಶುವೈದ್ಯೆಯನ್ನು ಕೊಂದಿದ್ದ ನೀರಾನೆಗೆ ಗರ್ಭಪಾತ!

- Advertisement -
- Advertisement -

ಶಿವಮೊಗ್ಗ: ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ. ಇದರಿಂದ ಗರ್ಭಕೋಶದ ಸೋಂಕು ಅದರ ದೇಹಕ್ಕೆ ವ್ಯಾಪಿಸಿ ಬಹು ಅಂಗಾಂಗ ವೈಫಲ್ಯವಾಗಿರುವ ಶಂಕೆ ವ್ಯಕ್ತವಾಗಿದೆ.

ನೀರಾನೆಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಬನ್ನೇರುಘಟ್ಟ ಮತ್ತು ಮೈಸೂರಿನಿಂದ ಆಗಮಿಸಿದ್ದ ತಜ್ಞ ವೈದ್ಯರು 2 ದಿನ ತಪಾಸಣೆ ನಡೆಸಿದ್ದಾರೆ. ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ನೀರಾನೆಯ ಬಹು ಅಂಗಾಂಗ ಸೋಂಕಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಕೂಡ ಆರಂಭಿಸಲಾಗಿದೆ.‌

ಕಳೆದ ತಿಂಗಳು ಡಾ.ಸಮೀಕ್ಷಾ ಅವರ ಮೇಲೆ ಹಂಸಿನಿ ದಾಳಿ ಮಾಡಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

- Advertisement -

Related news

error: Content is protected !!