Tuesday, June 9, 2026
spot_imgspot_img
spot_imgspot_img

ವಿಟ್ಲ: ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು

- Advertisement -
- Advertisement -

ವಿಟ್ಲ: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಣೇಶ್‌ ಸಾರಡ್ಕ (42) ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಸ್ವರ್ಗ ಚೆಕ್ ಪೋಸ್ಟ್‌ಗೆ ಕರ್ತವ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೃದಯಾಘಾತವಾಗಿದೆ.

ಸ್ವಗ್ರಹದಲ್ಲಿ ಆರೋಗ್ಯದಲ್ಲಿ ಏರುಪೇರು ಆದದನ್ನು ನೆರೆಹೊರೆಯ ಮನೆಯಯವರು ಕಂಡು ತಕ್ಷಣ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಗಣೇಶ್‌ ಎಣ್ಮಕಜೆ ಗ್ರಾಮದ ಪೆಲತ್ತಡ್ಕ ನಿವಾಸಿ. ಇವರ ಹೆಂಡತಿ ಮೈಸೂರಿನಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿಯಾಗಿರುತ್ತಾರೆ. ಮೃತರು ಹೆಂಡತಿ, ಒಂದು ಗಂಡು ಮಗು, ತಾಯಿಯನ್ನು ಅಲಿದ್ದಾರೆ.

- Advertisement -

Related news

error: Content is protected !!