Thursday, September 3, 2026
spot_imgspot_img
spot_imgspot_img

ವಿಟ್ಲದ ದಿ ನಾಲೇಡ್ಜ್ ಹಬ್ ವತಿಯಿಂದ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ- ವಿಟ್ಲ ಭಾಗದ ಎಲ್ಲಾ ಶಾಲೆಯ ಪ್ರಾಂಶುಪಾಲರನ್ನು ಒಂದೇ ವೇದಿಕೆಗೆ ಅತಿಥಿಯಾಗಿ ಆಹ್ವಾನಿಸಿದ ನಾಲೇಡ್ಜ್ ಹಬ್ ಸಂಸ್ಥೆ

- Advertisement -
- Advertisement -

ವಿಟ್ಲ: ವಿಟ್ಲದ ದಿ ನಾಲೇಡ್ಜ್ ಹಬ್ ವತಿಯಿಂದ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿಟ್ಲದ ಮೋತಿ ಸಿಟಿಯಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಅವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಕ್ಕಿದಾಗ ಅವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ನಾಲೇಡ್ಜ್ ಹಬ್ ವತಿಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶ್ಲಾಘನೀಯ ಎಂದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಮೂಡಿಬಂದ ವಿಟ್ಲ ಪರಿಸರದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಟೈಲರಿಂಗ್, ಮೆಹಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಟ್ಲ ಸೈಂಟ್ ರೀಟಾ ಪ್ರೌಢ ಶಾಲೆಯ ಪ್ರಾಂಶುಪಾಲ ಅಮೀತ್ ರೋಡ್ರಿಗಸ್, ವಿಟ್ಲ ವಿಠಲ ಪ್ರೌಢ ಶಾಲೆಯ ಮುಖ್ಯ. ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ವಿಟ್ಲ ಸರಕಾರಿ ಪ್ರೌಢ ಶಾಲೆಯ(ಆರ್ ಎಂ ಎಸ್ ಎ) ಪ್ರಾಂಶುಪಾಲೆ ಫೆಲ್ಸಿಟಾಸ್ ಈವಾ ಗಲ್ಬಾವೊ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ವಾರಿಜಾ ಬಿ ಎ, ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲ ಜಯರಾಮ ರೈ, ನಂತೂರು ಭಾರತೀ ಸಮೂಹ ವಿದ್ಯಾ ಸಂಸ್ಥೆಯ ಕೋಶಾಧಿಕಾರಿ, ಹಿರಿಯ ಪತ್ರಕರ್ತ ಉದಯಶಂಕರ್ ನೀರ್ಪಾಜೆ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ಮನಾಝಿರ್ ಮುಡಿಪು, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್, ಪ್ರಾಂಶುಪಾಲ ಲಿಬಿನ್ ಝೇವಿಯರ್, ವಿಠಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್, ವಿ ಟಿವಿ ಸಂಸ್ಥೆಯ ಆಡಳಿತ ನಿರ್ದೇಶಕ ರಾಮ್ ದಾಸ್ ಶೆಟ್ಟಿ, ವಿಟ್ಲ ಎಮಿನೆಂಟ್ ವಿದ್ಯಾ ಸಂಸ್ಥೆಯ ಚೇಯರ್ ಮ್ಯಾನ್ ಜುಬೈರ್ ಮಾಸ್ತರ್, ಮೋತಿ ಸಿಟಿ ಮಾಲಕ ಅಬ್ದುಲ್ ರವೂಪ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತ ನಿರ್ದೇಶಕ ಮಹಮ್ಮದ್ ಅಲಿ ವಿಟ್ಲ ಸ್ವಾಗತಿಸಿದರು. ಮಾಸಿತ ವಂದಿಸಿದರು. ಲೋಕೇಶ್ ರೈ ಬಾಕ್ರಬೈಲು ನಿರೂಪಿಸಿದರು.

- Advertisement -

Related news

error: Content is protected !!