Tuesday, July 21, 2026
spot_imgspot_img
spot_imgspot_img

ಆನ್‌ಲೈನ್ ಷೇರು ಹೂಡಿಕೆ ವಂಚನೆ: 6.8 ಕೋಟಿ ರೂಪಾಯಿ ಕಳೆದುಕೊಂಡ ವೃದ್ಧ

- Advertisement -
- Advertisement -

ಮುಂಬೈ: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಆಕರ್ಷಕ ಲಾಭ ಗಳಿಸಿಕೊಡುವ ಆಮಿಷವೊಡ್ಡಿದ ಸೈಬರ್ ವಂಚಕರು ದಕ್ಷಿಣ ಮುಂಬೈನ ಟಾರ್ಡಿಯೊ ನಿವಾಸಿ 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ 6.80 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಲಂಡನ್ ಮೂಲದ ಹಣಕಸು ಸಂಸ್ಥೆಯ ಹೆಸರು ಬಳಸಿಕೊಂಡು ಈ ವಂಚನೆ ನಡೆದಿದೆ. ಜಾಲತಾಣದಲ್ಲಿ ಹೂಡಿಕೆ ಜಾಹೀರಾತು ನೀಡಿದ ನಿವೃತ್ತ ಉದ್ಯೋಗಿ, ವಂಚಕರು ರಚಿಸಿದ ವಾಟ್ಸಪ್ ಗ್ರೂಪ್ ಸೇರಿದ್ದಾರೆ.

ಹೂಡಿಕೆಯ ಸಲಹೆಗಳನ್ನು ಈ ಗುಂಪಿನ ಮೂಲಕ ನೀಡಲಾಗಿದೆ. ಈ ಸಂಸ್ಥೆಯ ಮೂಲಕ ಹೂಡಿಕೆ ಮೂಡಿದರೆ ಮಾರುಕಟ್ಟೆಗೆ ಬಿಡುಗಡೆಯಾದ ಮತ್ತು ಬಿಡುಗಡ ಪೂರ್ವ ಐಪಿಓಗಳ ಮೂಲಕ ಸಾಂಸ್ಥಿಕ ವ್ಯಾಪಾರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ ಎಂದು ನಂಬಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.”ಆರಂಭದಲ್ಲಿ 20 ಸಾವಿರ ರೂಪಾಯಿ ವಾಪಾಸು ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಅವರು 7 ಕೋಟಿಗಿಂತ ಕಡಿಮೆ ಹೂಡಿಕೆ ಮಾಡಿ 149 ಕೋಟಿ ರೂಪಾಯಿ ಲಾಭ ಪಡೆದಿರುವುದನ್ನು ತೋರಿಸಲಾಗಿತ್ತು” ಎಂದು ಪೊಲೀಸರು ಹೇಳಿದ್ದಾರೆ. ಅವರ ವರ್ಚುವಲ್ ಖಾತೆಯಲ್ಲಿ ಕ್ರೋಢೀಕರಣಗೊಂಡ ಹಣವನ್ನು ತೆಗೆಯಲು ಪ್ರಯತ್ನಿಸಿದಾಗ ಇನ್ನಷ್ಟು ಹೆಚ್ಚು ಹೂಡಿಕೆ ಮಾಡುವಂತೆ ಸೂಚಿಸಿದರು. ಪದೇ ಪದೇ ಇವರ ಕರೆಗೆ ಉತ್ತರಿಸುವುದರಿಂದ ತಪ್ಪಿಸಿಕೊಂಡಾಗ ಸಂಶಯ ಮೂಡಿತು.

ಕಳೆದ ಏಪ್ರಿಲ್ 11ರಿಂದ ಮೇ 27ರ ಅವಧಿಯಲ್ಲಿ ಈ ವಂಚನೆ ನಡೆದಿದ್ದು, ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ 48 ವಹಿವಾಟುಗಳಲ್ಲಿ 6.80 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ದಕ್ಷಿಣ ಸೈಬರ್ ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!