Friday, June 12, 2026
spot_imgspot_img
spot_imgspot_img

ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ಗೆ ಪ್ರತಿಷ್ಠಿತ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ

- Advertisement -
- Advertisement -

ಗಾಯಕಿ, ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಅವರು, ಸಂಗೀತ ನಾಟಕ ಅಕಾಡೆಮಿ ಕೊಡುವ 2025ನೇ ಸಾಲಿನ ಪ್ರತಿಷ್ಠಿತ ‘ಉಸ್ತಾದ್‌ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

ಸಂಗೀತ, ನೃತ್ಯ, ಸೇರಿದಂತೆ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ.ಶಿವಶ್ರೀ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕರ್ನಾಟಕ ಸಂಗೀತ, ಭಜನೆ ಸೇರಿದಂತೆ ಭಕ್ತಿಗೀತೆಗಳನ್ನು ಭಾವಪೂರ್ಣವಾಗಿ ಹಾಡುತ್ತಾರೆ.

ಇವರ ಈ ಸಾಧನೆಗೆ ಸಂಗೀತ ವಿಭಾಗದಲ್ಲಿ ಪುರಸ್ಕಾರ ಸಂದಿದೆ.1952ರಿಂದ ಅಕಾಡೆಮಿ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರದಲ್ಲಿ ಅಕಾಡೆಮಿಯ ಫೆಲೋಶಿಪ್ ₹3 ಲಕ್ಷ, ಅಕಾಡೆಮಿ ಪ್ರಶಸ್ತಿಯಾಗಿ ₹1 ಲಕ್ಷ ಮತ್ತು ಇದರ ಜೊತೆಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರವು ₹25,000 ಬಹುಮಾನ, ತಾಮ್ರಪತ್ರ, ಅಂಗವಸ್ತ್ರವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!