Saturday, June 13, 2026
spot_imgspot_img
spot_imgspot_img

ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ? -ಎಕ್ಸಲ್ ಕಾಲೇಜಿಗೆ ಶಿಕ್ಷಣ ಇಲಾಖೆಯ ಖಡಕ್ ಕ್ರಮ; ಮಾನ್ಯತೆ ರದ್ದು

- Advertisement -
- Advertisement -

ಬೆಳ್ತಂಗಡಿ, ಜೂ.13: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಮಲೆಬೆಟ್ಟದಲ್ಲಿರುವ ಎಕ್ಸಲ್ ಪಿಯು ಕಾಲೇಜಿನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಶಿಕ್ಷಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಆರೋಪದ ಹಿನ್ನೆಲೆಯಲ್ಲಿ ಕಾಲೇಜಿನ ಮಾನ್ಯತೆ ರದ್ದುಪಡಿಸಲಾಗಿದೆ ಎಂಬ ಮಾಹಿತಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಮೂಲಗಳ ಪ್ರಕಾರ, ಕಾಲೇಜು ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲಿಸಲು ವಿಫಲವಾಗಿದ್ದು, ಅಗತ್ಯ ದಾಖಲೆಗಳ ಕುರಿತು ಪ್ರಶ್ನೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಪಿಯು ಕಾಲೇಜುಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಇತ್ತೀಚೆಗೆ ಅನಧಿಕೃತ ಕೇಂದ್ರಗಳಲ್ಲಿ ತರಗತಿಗಳನ್ನು ನಡೆಸುವ ಹಾಗೂ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇಂತಹ ಸಂಸ್ಥೆಗಳ ಮಾನ್ಯತೆ ಹಿಂಪಡೆಯುವ ಸಾಧ್ಯತೆಯನ್ನೂ ಇಲಾಖೆ ಸೂಚಿಸಿತ್ತು. ಎಕ್ಸಲ್ ಪಿಯು ಕಾಲೇಜು ಬೆಳ್ತಂಗಡಿ ತಾಲೂಕಿನ ಗುರುವಾರ್ಯಂಕೆರೆ-ಕುವೆಟ್ಟು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಈ ಬೆಳವಣಿಗೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಆದರೆ, ಮಾನ್ಯತೆ ರದ್ದು ಕುರಿತ ಅಧಿಕೃತ ಆದೇಶದ ಸಂಪೂರ್ಣ ವಿವರ ಹಾಗೂ ಶಿಕ್ಷಣ ಇಲಾಖೆಯ ಸ್ಪಷ್ಟ ಪ್ರಕಟಣೆ ಕಾಲೇಜಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!