Monday, June 29, 2026
spot_imgspot_img
spot_imgspot_img

ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಡಿ ವತಿಯಿಂದ ’ಧನ್ಯೋಸ್ಮಿ’ ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮ

- Advertisement -
- Advertisement -

ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317d ವತಿಯಿಂದ ’ಧನ್ಯೋಸ್ಮಿ’ ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮ ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಯವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ದಕ್ಷಿಣ ಕನ್ನಡ ಸದಸ್ಯರ ಕೂಡುವಿಕೆಯಿಂದ ವೈಭವ ಪೂರ್ಣವಾಗಿ ನಡೆಯಿತು ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಭೆಯಲ್ಲಿ ಕ್ಯಾಬಿನೆಟ್ ತಂಡವನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪರಾಜ್ಯ ಪಾಲ ವೆಂಕಟೇಶ್ ಹೆಬ್ಬಾರ್, ಕ್ಯಾಬಿನೆಟ್ ಕಾರ್ಯದರ್ಶಿ ಹೆಚ್ಆರ್ ಚಂದ್ರೇಗೌಡ , ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ರಾಜ್ಯಪಾಲರ ಸಂಯೋಜಕ ಜ್ಯೋತಿ ಶೆಟ್ಟಿ ಕ್ಯಾಬಿನೆಟ್ ಸಂಯೋಜಕ ನೆನ್ಸಿ ಮಸ್ಕರೇನಿಯಸ್, ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ , ಪ್ರಮೀಳಾ ಶ್ರೀನಿವಾಸ್ ಪೂಜಾರಿ, ಸಂಭ್ರಮ ಕಾರ್ಯಕ್ರಮದ ಸಂಯೋಜಕರುಗಳು ಉಪಸ್ಥಿತರಿದ್ದರು ಹಾಗೆ ಮಾಜಿ ರಾಜ್ಯಪಾಲರು ಕೂಡ ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಜಿಲ್ಲಾ ಸಂಭ್ರಮ ಕಾರ್ಯಕ್ರಮದ ಪ್ರಧಾನ ಸಂಯೋಜಕ ಶ್ರೀನಿವಾಸ ಪೂಜಾರಿ ಮೆಲ್ಕರ್ ಎಲ್ಲರನ್ನ ಪ್ರೀತಿಯಿಂದ ಸ್ವಾಗತಿಸಿ , ನಂತರ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಕುಂಬ್ಳೆ ನರಸಿಂಹ ಪ್ರಭು ಹಾಗೂ ಸೌಜನ್ಯ ಹೆಗಡೆ ನಿರೂಪಿಸಿದರು

- Advertisement -

Related news

error: Content is protected !!