Wednesday, July 1, 2026
spot_imgspot_img
spot_imgspot_img

40 ಡಿಗ್ರಿ ತಾಪಮಾನಕ್ಕೆ ಕರಗುತ್ತಿವೆ ಯುರೋಪ್‌ ನ ರಸ್ತೆಗಳು..!

- Advertisement -
- Advertisement -

ಯು.ಕೆ :ಯುರೋಪ್ ರಾಷ್ಟ್ರಗಳಲ್ಲಿ ಪ್ರಸ್ತುತ ತೀವ್ರತರವಾದ ಬಿಸಿಗಾಳಿ ಆವರಿಸಿದ್ದು ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದ್ದಂತೆ ರಸ್ತೆಗಳು ಕರಗಲು ಆರಂಭಿಸಿವೆ.

ಬ್ರಿಟನ್‌ನ ಸಾರಿಗೆ ವ್ಯವಸ್ಥೆ ಮತ್ತು ರಸ್ತೆಗಳನ್ನು ಮೂಲತಃ ಅಲ್ಲಿನ ದೀರ್ಘಾವಧಿಯ ಚಳಿ, ಮಳೆ ಮತ್ತು ಹಿಮಪಾತವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ಬೇಸಿಗೆಯ ಸರಾಸರಿ ತಾಪಮಾನವು 20 ರಿಂದ 25 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹೀಗಾಗಿ ಅಲ್ಲಿನ ರಸ್ತೆಗಳು 40 ಡಿಗ್ರಿ ತಾಪಮಾನ ತಲುಪಿದಾಗ ಬಿಸಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ಮೃದುವಾಗಿ ಕರಗಲು ಆರಂಭಿಸುತ್ತವೆ.

ಭಾರತದಲ್ಲಿ ಮೊದಲಿನಿಂದಲೂ ರಸ್ತೆಗಳನ್ನು ಸುಡುವ ಬಿಸಿಲಿಗೆ ತಕ್ಕಂತೆ ರೂಪಿಸಲಾಗುತ್ತದೆ. ಭಾರತದ ಹೆದ್ದಾರಿಗಳನ್ನು ದೇಶದ ವಿಪರೀತ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.

ರಸ್ತೆ ನಿರ್ಮಾಣದಲ್ಲಿ ಬಳಸುವ ಡಾಂಬರು ಅಥವಾ ಬಿಟುಮೆನ್ ಗುಣಮಟ್ಟ ಈ ಎರಡೂ ದೇಶಗಳಲ್ಲಿ ಭಿನ್ನವಾಗಿರುತ್ತದೆ. ಬ್ರಿಟನ್‌ನಲ್ಲಿ ಚಳಿಗಾಲದಲ್ಲಿ ರಸ್ತೆಗಳು ಬಿರುಕು ಬಿಡದಂತೆ ತಡೆಯಲು ಕಡಿಮೆ ತಾಪಮಾನದಲ್ಲೂ ಮೃದುವಾಗಿರುವ ಬಿಟುಮೆನ್ ಅನ್ನು ಬಳಸಲಾಗುತ್ತದೆ. ವಾತಾವರಣದ ತಾಪಮಾನವು 30°C ನಿಂದ 40°C ಇದ್ದಾಗ, ಕಪ್ಪು ಬಣ್ಣದ ಡಾಂಬರು ರಸ್ತೆಗಳು ಸೂರ್ಯನ ಶಾಖವನ್ನು ತೀವ್ರವಾಗಿ ಹೀರಿಕೊಳ್ಳುತ್ತವೆ. ಸಾಧಾರಣವಾಗಿ ರಸ್ತೆಯ ಮೇಲ್ಮೈ ತಾಪಮಾನವು ವಾತಾವರಣದ ತಾಪಮಾನಕ್ಕಿಂತ 10-15 ಡಿಗ್ರಿ ಹೆಚ್ಚಿರುತ್ತದೆ. ಈ ಕಾರಣದಿಂದ ಈ ಬಿಟುಮೆನ್ ಸುಮಾರು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಕರಗಲು ಆರಂಭಿಸುತ್ತದೆ.

ಜರ್ಮನಿಯಲ್ಲಿ ತಾಪಮಾನವು 41.7 ಸೆಲ್ಸಿಯಸ್‌ ದಾಟಿದೆ. ಇದರಿಂದಾಗಿ ಟ್ರಾಮ್ ಹಳಿಗಳ ಸುತ್ತಲೂ ರಸ್ತೆ ಜೋಡಣೆಗೆ ಬಳಸಲಾಗುವ ಬಿಟುಮಿನ್ ಮತ್ತು ರಬ್ಬರ್ ಮಿಶ್ರಿತ ಸೀಲಾಂಟ್ (ಜಾಯಿಂಟ್ ಸೀಲರ್) ಸಂಪೂರ್ಣವಾಗಿ ಕರಗಿದೆ. ಈ ಕರಗಿದ ಜಿಗುಟಾದ ದ್ರವವು ಟ್ರಾಮ್ ಹಳಿಗಳ ಮತ್ತು ಟ್ರ್ಯಾಕ್ ಸ್ವಿಚ್‌ಗಳ ಒಳಗೆ ಹರಿದು ಬಂದು ಗಟ್ಟಿಯಾಗಿದೆ. ಇದರಿಂದಾಗಿ ಟ್ರಾಮ್ ಚಕ್ರಗಳು ಹಳಿಗಳ ಮೇಲೆ ಚಲಿಸಲು ಸಾಧ್ಯವಾಗದೆ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಕೆಲವು ಕಡೆ ಲೋಹದ ಹಳಿಗಳು ಕರಗದೇ ಇದ್ದರೂ ಅತಿಯಾದ ಶಾಖಕ್ಕೆ ಸಿಕ್ಕಿ ಅವುಗಳು ವಿಸ್ತರಣೆಯಾಗಿ ಉಬ್ಬಿಕೊಂಡಿವೆ. ಹೀಗಾಗಿ ಬ್ರಿಟನ್ ಸೇರಿದಂತೆ ಹಲವು ಯರೋಪ್‌ ರಾಷ್ಟ್ರಗಳು ಈಗ ಇಕ್ಕಟ್ಟಿಗೆ ಸಿಲುಕಿದೆ.

ಯುರೋಪ್‌ನಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳೀಯ ಸಂಸ್ಥೆಗಳು ಹಿಮದ ದಿನಗಳಲ್ಲಿ ಬಳಸುವ ‘ಗ್ರಿಟರ್’ ಲಾರಿಗಳ ಮೂಲಕ ರಸ್ತೆಯ ಮೇಲೆ ಕಲ್ಲಿನ ಪುಡಿ ಅಥವಾ ಮರಳನ್ನು ಉದುರಿಸಿ ರಸ್ತೆಯನ್ನು ಗಟ್ಟಿಗೊಳಿಸುವ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!