Thursday, July 2, 2026
spot_imgspot_img
spot_imgspot_img

ಭಾರತೀಯ ವಾಯುಪಡೆಯ ಉಪಮುಖ್ಯಸ್ಥರಾಗಿ ಏರ್‌ಮಾರ್ಷಲ್ ಅಶುತೋಷ್‌ ದೀಕ್ಷಿತ್ ಅಧಿಕಾರ ಸ್ವೀಕಾರ

- Advertisement -
- Advertisement -

ಹೊಸದಿಲ್ಲಿ: ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಬುಧವಾರ ವಾಯುಪಡೆಯ ನೂತನ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಜೂ.30 ರಂದು ನಿವೃತ್ತರಾದ ಏರ್ ಮಾರ್ಷಲ್ ನಾಗೇಶ್ ಕಪೂ‌ರ್ ಅವರ ಸ್ಥಾನಕ್ಕೆ ದೀಕ್ಷಿತ್ ನೇಮಕಗೊಂಡಿದ್ದಾರೆ.

ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಏ‌ರ್ ಮಾರ್ಷಲ್ ದೀಕ್ಷಿತ್ ಅವರು ದಿಲ್ಲಿಯ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಐಡಿಎಸ್) ಪ್ರಧಾನ ಕಚೇರಿಯಲ್ಲಿ ಐಡಿಎಸ್‌ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾಯುಪಡೆಯ ಪ್ರಧಾನ ಕಚೇರಿಯಾದ ವಾಯುಭವನದಲ್ಲಿ ಏರ್ ಮಾರ್ಷಲ್ ದೀಕ್ಷಿತ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಡಿಸೆಂಬರ್ 1986ರಲ್ಲಿ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಸೇರ್ಪಡೆಗೊಂಡಿದ್ದ ಏರ್ ಮಾರ್ಷಲ್ ದೀಕ್ಷಿತ್ ಅವರು ಖಡಕವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಬಾಂಗ್ಲಾದೇಶದ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ಮತ್ತು ದಿಲ್ಲಿಯ ನ್ಯಾಷನಲ್‌ ಡಿಫೆನ್ಸ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ದೀಕ್ಷಿತ್ ಅರ್ಹ ಫೈಯಿಂಗ್ ಇನ್‌ಸ್ಟಕ್ಟರ್ ಮತ್ತು ಪ್ರಾಯೋಗಿಕ ಟೆಸ್ಟ್ ಪೈಲಟ್ ಆಗಿದ್ದು, ಮಿರಾಜ್-2000, ಮಿಗ್-21 ಮತ್ತು ಜಾಗ್ವಾರ್ ಸೇರಿದಂತೆ 20ಕ್ಕೂ ಹೆಚ್ಚು ಮಾದರಿಯ ವಿಮಾನಗಳಲ್ಲಿ 3,300 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

- Advertisement -

Related news

error: Content is protected !!